ರಾಮ್​ಚರಣ್​ ಚಿತ್ರಕ್ಕೆ ಪವನ್​ ಕಲ್ಯಾಣ್​ ಬಂಡವಾಳ

pawan-kalyan-ram-charan
Published on

ಟಾಲಿವುಡ್​ ಸ್ಟಾರ್ ನಟ ರಾಮ್​ಚರಣ್​ ತೇಜ ಸದ್ಯ ಆರ್​ಆರ್​ಆರ್ ಸಿನಿಮಾ ಒಪ್ಪಿಕೊಂಡು ಅದರ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಆಂಧ್ರದಲ್ಲಿ ಸಿನಿಮಾ ಶೂಟಿಂಗ್​ಗೆ ಅನುಮತಿ ಕೊಟ್ಟ ಬೆನ್ನಲ್ಲೇ ಚಿತ್ರೀಕರಣ ಆರಂಭಿಸಲು ನಿರ್ದೇಶಕ ರಾಜಮೌಳಿ ಪ್ಲ್ಯಾನ್​ ಮಾಡಿದ್ದರು. ಆದರೆ, ಕೊನೇ ಕ್ಷಣದಲ್ಲಿ ಕರೊನಾ ಹಿನ್ನೆಲೆಯಲ್ಲಿ ಅದು ಮತ್ತೆ ಮುಂದಕ್ಕೆ ಹೋಯಿತು. ಇದೆಲ್ಲದರ ನಡುವೆಯೇ ಹೊಸ ಸುದ್ದಿಯೊಂದು ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ.

ಹೌದು, ಟಾಲಿವುಡ್​ ಪವರ್​ಸ್ಟಾರ್ ಪವನ್​ ಕಲ್ಯಾಣ್​ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್​ ಮಾಡಿದ್ದಾರೆ. ಹಾಗಂತ ಅವರ ಚಿತ್ರಕ್ಕೆ ಅವರೇ ಪ್ರೋಡ್ಯೂಸರ್ ಆಗುತ್ತಿಲ್ಲ. ಬದಲಿಗೆ, ಅಣ್ಣನ ಮಗ ರಾಮ್​ಚರಣ್​ ತೇಜ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರಂತೆ. ಹೀಗೊಂದು ಸುದ್ದಿ ಹರಿದಾಡುತ್ತಿದ್ದಂತೆ, ನಿರ್ದೇಶಕ ಯಾರು ಎಂಬ ಬಗ್ಗೆಯೂ ಕುತೂಹಲ ಮೂಡಿಸಿತ್ತು. ಅದಕ್ಕೂ ಉತ್ತರ ಸಿಕ್ಕಿದ್ದು, ತ್ರಿವಿಕ್ರಮ್​ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸ್ವತಃ ರಾಮ್​ಚರಣ್​ ತಮಗಾಗಿ ಒಂದು ಕಥೆ ಬರೆದು ನಿರ್ದೇಶನ ಮಾಡುವಂತೆ ತ್ರಿವಿಕ್ರಮ್​ ಬಳಿ ಕೇಳಿಕೊಂಡಿದ್ದಾರಂತೆ. ಆದರೆ, ತ್ರಿವಿಕ್ರಮ್​ ಸದ್ಯ ಜೂ. ಎನ್​ಟಿಆರ್​ಗಾಗಿ ಕತೆಯೊಂದನ್ನು ಬರೆಯುತ್ತಿದ್ದು, ಆ ಸಿನಿಮಾ ಕೆಲಸ ಮುಗಿದ ಬಳಿಕವಷ್ಟೇ ಚರಣ್​ಗೆ ಕತೆ ಬರೆಯಲಿದ್ದಾರೆ. ಹಾಗೆ ಸಿದ್ಧವಾದ ಕಥೆಗೆ ಪವನ್​ಕಲ್ಯಾಣ್ ಬಂಡವಾಳ ಹೂಡಲಿದ್ದಾರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net