ಹೌದು, ರಾಜೀವ್ ಗಾಂಧಿ ಅವರನ್ನು ಕೊಂದ ಮಾದರಿಯಲ್ಲಿ ಮಾನವ ಬಾಂಬ್ ಆಗಿ ಜಗನ್ ಅವರನ್ನು ಕೊಲ್ಲುತ್ತೇನೆ ಎಂದು ನಟ ಪವನ್ ಕಲ್ಯಾಣ್ ಅಭಿಮಾನಿ ಟ್ವಿಟ್ಟರ್ನಲ್ಲಿ ಹೇಳಿದ್ದಾರಂತೆ. ಹೀಗಾಗಿ, ಆ ಅಭಿಮಾನಿಯ ವಿರುದ್ಧ ತಿರುಪತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರು ಸಹ ಹಲವು ನಗರಗಳಲ್ಲಿ ಪವನ್ ಅಭಿಮಾನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಂದಹಾಗೆ, ಸಿಎಂ ಜಗನ್ ಅನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ನಟ ಪವನ್ ಕಲ್ಯಾಣ್ ಅಭಿಮಾನಿ, ನಟನಿಗಾಗಿ ನಾನು ಸೂಸೈಡ್ ಬಾಂಬರ್ ಆಗಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆ ಎಂದಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ಹಾಗೂ ಜಗನ್ ನಡುವೆ ತೀವ್ರ ವಾಗ್ದಾಳಿಗಳು ನಡೆದಿದ್ದವು. ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಸಿನಿಮಾಕ್ಕೆ ಜಗನ್ ಸರ್ಕಾರ ಸಮಸ್ಯೆ ನೀಡಿತ್ತು ಎಂಬ ಆರೋಪಗಳು ಕೇಳಿಬಂದಿವೆ.