ಎರಡು ದಿನ ಸ್ನಾನ ಮಾಡಲಿಲ್ಲವಂತೆ ಪರಿಣೀತಿ ಚೋಪ್ರಾ ... ಯಾಕೆ?

Parineeti Chopra - Final
Published on

ಮುಂಬೈ: ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಅವರ ಅಭಿನಯದ ಮೂರು ಚಿತ್ರಗಳು ‘ಎ ಗರ್ಲ್ ಆನ್ ದಿ ಟ್ರೈನ್’, ‘ಸೈನಾ’ ಮತ್ತು ‘ಸಂದೀಪ್ ಔರ್ ಪಿಂಕಿ ಫರಾರ್’ ಬ್ಯಾಕ್​ ಟು ಬ್ಯಾಕ್​ ಬಿಡುಗಡೆಯಾಗಿದ್ದಷ್ಟೇ ಅಲ್ಲ, ಈ ಮೂರೂ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗುವುದರ ಜತೆಗೆ, ಪರಿಣೀತಿಗೆ ಹೆಸರು ತಂದುಕೊಟ್ಟಿದೆಯಂತೆ.

ಇನ್ನು, 'ಸಂದೀಪ್​ ಔರ್​ ಪಿಂಕಿ ಫರಾರ್​' ಚಿತ್ರದಲ್ಲಿನ ಸಂದರ್ಭದಲ್ಲಿ ಆದ ಒಂದು ವಿಷಯವನ್ನು ಪರಿಣೀತಿ ಇದೀಗ ಹಂಚಿಕೊಂಡಿದ್ದಾರೆ. ಅದೇನೆಂದರೆ, ಚಿತ್ರದಲ್ಲಿನ ಒಂದು ಸನ್ನಿವೇಶಕ್ಕಾಗಿ ಅವರು ಎರಡು ದಿನಗಳ ಕಾಲ ಸ್ನಾನ ಮಾಡಿರಲಿಲ್ಲವಂತೆ.

ಹೌದು, ಚಿತ್ರದಲ್ಲಿನ ಒಂದು ಗುಡಿಸಲಿನ ಸನ್ನಿವೇಶವಿದೆ. ಅದರಲ್ಲಿ ದಾರಿ ಮಧ್ಯೆ ಪರಿಣೀತಿಗೆ ಗರ್ಭಪಾತವಾಗಿ, ಅವರನ್ನು ಅರ್ಜುನ್​ ಕಪೂರ್​ ಒಂದು ಗುಡಿಸಲಿಗೆ ಕರೆದು ತರುತ್ತಾರಂತೆ. ಅಲ್ಲಿ ಆಕೆಯನ್ನು ಶುಶ್ರೂಷೆ ಮಾಡುತ್ತಾರಂತೆ. ಈ ಸನ್ನಿವೇಶವನ್ನು ಚಿತ್ರೀಕರಿಸುವುದಕ್ಕೆ ಎರಡ್ಮೂರು ದಿನ ಬೇಕಾಯಿತಂತೆ. ಅಲ್ಲಿನ ಕೊಳೆ, ಧೂಳಿನ ಮಧ್ಯೆ ಸನ್ನಿವೇಶ ಇದ್ದ ಹಿನ್ನೆಲೆಯಲ್ಲಿ, ಕಂಟಿನ್ಯುಟಿ ಮಿಸ್​ ಆಗಬಾರದು ಮತ್ತು ನೈಜವಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪರಿಣೀತಿ, ಎರಡು ದಿನಗಳ ಕಾಲ ಸ್ನಾನ ಮಾಡಲಿಲ್ಲವಂತೆ.

ಈ ಕುರಿತು ಮಾತನಾಡಿರುವ ಅವರು, 'ಅಲ್ಲಿಯ ಲೊಕೇಶನ್​ ಬಹಳ ಗಲೀಜಾಗಿತ್ತು. ಮೊದಲ ದಿನದ ಚಿತ್ರೀಕರಣದ ಅಂತ್ಯದಲ್ಲಿ, ದೇಹವೆಲ್ಲ ಮಣ್ಣಾಗಿತ್ತು. ಧೂಳಿನಿಂದಾಗಿ ಕೂದಲು ಸಹ ಬೆಳ್ಳಗಾಗಿತ್ತು. ಅದನ್ನು ಕ್ಲೀನ್ ಮಾಡುವುದಕ್ಕೆ ಹೋಗಲಿಲ್ಲ. ನೇರವಾಗಿ ರೂಮ್​ಗೆ ಹೋಗಿ ನಿದ್ದೆ ಮಾಡಿ, ಮರುದಿನ ಎದ್ದು ಬಂದೆ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net