ಅಂದು ಫಿಲಂಫೇರ್​ ನೋಡಲು ಬೇರೆಯವರ ಪಾಸ್​ನಲ್ಲಿ ಹೋಗಿದ್ದಾಕೆ ಇಂದು ದೊಡ್ಡ ನಟಿ..!

Pooja 2
Published on

ಬೆಂಗಳೂರು: ಅಂದು ಬಾಲ್ಯದಲ್ಲಿ ಫಿಲಂಫೇರ್ ನೋಡಲು ಬೇರೆಯವರ ಪಾಸ್​ನಲ್ಲಿ ಹೋಗಿದ್ದಾಕೆ ಇಂದು ದೊಡ್ಡ ನಟಿ. ಹಾಗಂತ ಇದ್ಯಾವುದೋ ಗಾಸಿಪ್​ ಅಲ್ಲ. ಏಕೆಂದರೆ ಈ ವಿಷಯವನ್ನು ಸ್ವತಃ ಆ ನಟಿಯೇ ಹೇಳಿಕೊಂಡಿದ್ದಾರೆ. ಅಂದಹಾಗೆ, ಬಾಲ್ಯದ ತಮ್ಮ ಆ ಅನುಭವ ಹಂಚಿಕೊಂಡವರು ಬೇರಾರೂ ಅಲ್ಲ, ನಟಿ ಪೂಜಾ ಹೆಗ್ಡೆ.

ನಾನು ಚಿಕ್ಕವಳಿದ್ದಾಗ ಫಿಲಂಫೇರ್​ ಪ್ರಶಸ್ತಿ ಪ್ರದಾನದ ಕಾರ್ಯಕ್ರಮ ನೋಡಲು ಉತ್ಸುಕಳಾಗಿದ್ದೆ. ಆದರೆ, ಪಾಸ್ ಸಿಕ್ಕಿರಲಿಲ್ಲ. ಬೇರೆಯವರ ಪಾಸ್‌ನಲ್ಲಿ ಹೋಗಿ ನೋಡಿದ್ದೆ ಎಂದು ತೆಲುಗು ನಟಿ, ಕನ್ನಡತಿ ಪೂಜಾ ಹೆಗ್ಡೆ ತಾವು ಫಿಲಂಫೇರ್​ ಕಾರ್ಯಕ್ರಮಕ್ಕೆ ಹೋಗಲು ಪಟ್ಟ ಕಷ್ಟವನ್ನು ಬಿಚ್ಚಿಟ್ಟರು.

ಕೆಎಫ್ಎಫ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಎಂದರೆ ತುಂಬಾ ಇಷ್ಟ. ಚಿಕ್ಕವಳಿದ್ದಾಗ ಒಮ್ಮೆ ಫಿಲಂಫೇರ್​ ನಡೆಯುತ್ತಿತ್ತು. ಇದನ್ನು ನೋಡಲು ನಮ್ಮ ಮನೆಯವರ ಬಳಿ ಪಾಸ್ ಇರಲಿಲ್ಲ. ಹೇಗೋ ಬೇರೆಯವ ಪಾಸ್ ಪಡೆದು ಒಂದೇ ಸೀಟಿನಲ್ಲಿ ಇಬ್ಬರು ಕುಳಿತು ಫಿಲಂಫೇರ್​​ ನೋಡಿದ್ದೆ. ಆದರೆ, ಇಂದು ನಾನು ಸಿನಿಮಾ ಕ್ಷೇತ್ರದಲ್ಲಿರುವುದು ಖುಷಿ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net