ಟೈಗರ್ ಭಾಗಿ 3 ಚಿತ್ರದ ಪೋಸ್ಟರ್ ಕಾಪಿ ಹೊಡೆದ್ರಾ ಆದಿತ್ಯ!

Om
Published on

ಮುಂಬೈ: ಬಾಲಿವುಡ್​ ನಟ ಆದಿತ್ಯಾ ರಾಯ್​ ಕಪೂರ್​ ಲವರ್​ಬಾಯ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಈ ಸಲ ರಗಡ್ ಅವತಾರದಲ್ಲಿ ಎದುರಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಓಂ ಶೀರ್ಷಿಕೆಯ ಹೊಸ ಸಿನಿಮಾ ಶುರುವಾಗಿದ್ದು, ಅದರ ಫಸ್ಟ್ ಲುಕ್ ಪೋಸ್ಟರ್ ವೈರಲ್​ ಆಗಿದೆ. ಆದರೆ, ಮೆಚ್ಚುಗೆಗಿಂತ ಕಾಪಿ ಎಂಬ ಪದವನ್ನೇ ಈ ಪೋಸ್ಟರ್​ಗೆ ನೆಟ್ಟಿಗರು ಹೆಚ್ಚು ಬಳಸುತ್ತಿದ್ದಾರೆ.

ಕಪಿಲ್ ವರ್ಮಾ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದಲ್ಲಿ ರಗಡ್​ ಅವತಾರದಲ್ಲಿ ಆದಿತ್ಯಾ ಕಾಣಿಸಿಕೊಂಡಿದ್ದು, ಪೋಸ್ಟರ್​ನಲ್ಲಿ ಗನ್​ ಹಿಡಿದು ಗುಂಡಿನ ಮಳೆ ಸುರಿಸುವ ಆ್ಯಕ್ಷನ್​ನಲ್ಲಿ ಎದುರಾಗಿದ್ದಾರೆ. ಅವರ ಆ ಲುಕ್​ ಥೇಟ್ ಭಾಗಿ 3 ಚಿತ್ರದ ಪೋಸ್ಟರ್ ಅನ್ನೇ ಹೋಲುತ್ತಿರುವುದಕ್ಕೆ ನೆಟ್ಟಿಗರು ಪೋಸ್ಟರ್ ಬಗ್ಗೆ ಬಗೆ ಬಗೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಪೋಸ್ಟರ್​ನಿಂದ ಅಷ್ಟೇನೂ ಕುತೂಹಲ ಮೂಡಲಿಲ್ಲ. ನೋಡಲು ಭಾಗಿ 3 ಪೋಸ್ಟರ್ ರೀತಿಯಲ್ಲಿಯೇ ಇದೆ. ಮುಖ ಅಷ್ಟೇ ಬದಲಿ ಮಾಡಲಾಗಿದೆ. ಇನ್ನೂ ಬೇರೆ ರೀತಿಯಲ್ಲಿ ಮಾಡಬಹುದಿತ್ತು. ಹಾಗಾಗಿ ಸಿನಿಮಾದಲ್ಲಿನ ನಿಮ್ಮ ಆ್ಯಕ್ಷನ್ ನೋಡಲು ಕಾತರರಾಗಿದ್ದೇವೆ ಎಂಬ ಕಮೆಂಟ್​ಗಳು ಬಂದಿವೆ. ಭಾಗಿ 3ಚಿತ್ರದಿಂದ ಸ್ಫೂರ್ತಿ ಪಡೆಯಲಾಗಿದೆ.

ಜೀ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ನಿರ್ಮಾಣ ವಾಗುತ್ತಿರುವ ಈ ಚಿತ್ರಕ್ಕೆ ಅಹ್ಮದ್ ಖಾನ್, ಶೈರಾ ಖಾನ್ ಬಂಡವಾಳ ಹೂಡುತ್ತಿದ್ದಾರೆ. 2021ರ ಮಧ್ಯೆದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net