More

    ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ … ಯಾಕೆ?

    ಹೈದರಾಬಾದ್​: ಟಾಲಿವುಡ್​ನ ಬಹುಬೇಡಿಕೆಯ ಹೀರೋಯಿನ್​ಗಳಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರು. ‘ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

    ಒಬ್ಬ ನಟ ಅಥವಾ ನಟಿ ಹೊಸ ಸಿನಿಮಾ ಒಪ್ಪಿಕೊಳ್ಳುವುದು ದೊಡ್ಡ ವಿಷಯವೇನಲ್ಲ. ಹಾಗಾಗಿ ಪೂಜಾ ಹೊಸ ವಿಷಯ ಒಪ್ಪಿಕೊಂಡಿದ್ದು ಸಹ ದೊಡ್ಡ ವಿಷಯವಲ್ಲ. ಆದರೆ, ಅವರು ತಾವು ಪಡೆಯುತ್ತಿರುವ ಸಂಭಾವನೆಗಿಂಥ ಈ ಸಿನಿಮಾಗೆ ಸಂಭಾವನೆ ಕಡಿಮೆ ಪಡೆಯುತ್ತಿರುವುದು ವಿಶೇಷ.

    ಇದನ್ನೂ ಓದಿ: ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; ‘ಜುಗ್ ಜುಗ್​ ಜೀಯೊ’ ಚಿತ್ರೀಕರಣ ಸ್ಥಗಿತ 

    ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ ... ಯಾಕೆ?

    ಪೂಜಾ, ಒಂದು ಚಿತ್ರಕ್ಕೆ ಎರಡರಿಂದ ಮೂರು ಕೋಟಿಯವರೆಗೂ ಸಂಭಾವನೆಯನ್ನು ಪಡೆಯುತ್ತಾರೆ. ಆದರೆ, ಹೊಸ ಚಿತ್ರವೊಂದಕ್ಕೆ ಅವರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ. ಲಾಕ್​ಡೌನ್​ನಿಂದ ಹಲವು ನಿರ್ಮಾಪಕರು ಕಷ್ಟ ಎದುರಿಸಿದ್ದರಿಂದ, ಹಲವು ನಟ-ನಟಿಯರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದರು. ವಿಜಯ್, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರು ತಮ್ಮ ಸಂಭಾವನೆಯಲ್ಲಿ ರಿಯಾಯ್ತಿ ಕೊಟ್ಟಿದ್ದರು. ಪೂಜಾ ಸಹ ಹಾಗೆಯೇ ಮಾಡಿದರಾ ಎಂಬ ಪ್ರಶ್ನೆ ಸಹಜ. ಹಾಗೇನಿಲ್ಲ, ಪೂಜಾ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿಕೊಂಡಿದ್ದು ಚಿತ್ರತಂಡಕ್ಕಾಗಿ.

    ಮಲಯಾಳಂ ನಟ ದುಲ್ಕರ್​ ಸಲ್ಮಾನ್​, ಹನು ರಾಘವಪುಡಿ ನಿರ್ದೇಶನದ ಹೊಸ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯುದ್ಧದ ಹಿನ್ನೆಲೆಯಿರುವ ಈ ಚಿತ್ರದಲ್ಲಿ ಸೈನ್ಯದ ಲೆಫ್ಟಿನೆಂಟ್​ ಪಾತ್ರದಲ್ಲಿ ದುಲ್ಕರ್​ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ನಾಯಕಿಯಾಗಿ ಪೂಜಾ ಇದ್ದರೆ ಎಂದು ಚೆನ್ನ ಎಂದನಿಸಿದೆ. ಆದರೆ, ಆಕೆಯ ಸಂಭಾವನೆ ಕೇಳಿ ಬೆಚ್ಚಿಬಿದ್ದ ಚಿತ್ರತಂಡದವರು, ಬೇಡ ಎಂದು ಸುಮ್ಮನಿದ್ದರಂತೆ.

    ಇದನ್ನೂ ಓದಿ: ಹಪ್ಪಳ ಮಾಡೋಕೆ ಹೊರಟಿದ್ದಾರೆ ಕಿಯಾರಾ ಅಡ್ವಾನಿ …

    ಕೊನೆಗೆ ನಿರ್ಮಾಪಕರಾದ ಸ್ವಪ್ನ ಮತ್ತು ಪ್ರಿಯಾಂಕಾ ದತ್​, ಪೂಜಾಗೆ ಚಿತ್ರದ ಬಗ್ಗೆ ಹೇಳಿದ್ದಾರೆ. ಹಾಗೆಯೇ ಅಷ್ಟೊಂದು ಸಂಭಾವನೆ ಕೊಡುವುದಕ್ಕೆ ಸಾಧ್ಯವೂ ಇಲ್ಲ ಎಂದಿದ್ದಾರೆ. ಕೊನೆಗೆ, ಚಿತ್ರತಂಡಕ್ಕೋಸ್ಕರ ಪೂಜಾ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ.

    ಇದೊಂದು ಪೀರಿಯಡ್​ ಸಿನಿಮಾ ಆಗಿದ್ದು, ಚಿತ್ರದಲ್ಲಿ ಲೆಫ್ಟಿನೆಂಟ್​ ರಾಮ್​ ಪಾತ್ರದಲ್ಲಿ ದುಲ್ಕರ್​ ನಟಿಸಿದರೆ, ಅವರ ಪ್ರೇಯಸಿಯಾಗಿ ಪೂಜಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಪೊಗರು’ ಚಿತ್ರದ ತೆಲುಗು ಡಬ್ಬಿಂಗ್​ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts