ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; ‘ಜುಗ್ ಜುಗ್​ ಜೀಯೊ’ ಚಿತ್ರೀಕರಣ ಸ್ಥಗಿತ

Varun Dhawan
Published on

ಮುಂಬೈ: ಬಾಲಿವುಡ್ ನಟ ಅನಿಲ್​ ಕಪೂರ್, ವರುಣ್ ಧವನ್ ಮತ್ತು ನಟಿ ನೀತು ಕಪೂರ್​ಗೆ ಕರೊನಾ ಸೋಂಕು ತಗುಲಿದೆ. ಜುಗ್ ಜುಗ್ ಜಿಯೋ ಸಿನಿಮಾದ ಚಿತ್ರೀಕರಣಕ್ಕೆಂದು ಮುಂಬೈಯಿಂದ ಚಂಡೀಗಢಕ್ಕೆ ತೆರಳುವ ಮುನ್ನ, ಮುನ್ನೆಚ್ಚರಿಕೆ ಕ್ರಮವಾಗಿ ತಂಡದ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಈ ಕಲಾವಿದರಿಗೆ ಕರೊನಾ ಇರುವುದು ಖಚಿತವಾಗಿದೆ.

ಇವರಷ್ಟೇ ಅಲ್ಲ ಚಿತ್ರದ ನಿರ್ದೇಶಕ ರಾಜ್​ ಮೆಹ್ತಾಗೂ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಇಡೀ ತಂಡ ಸದ್ಯ ಶೂಟಿಂಗ್ ತ್ಯಜಿಸಿ ಕ್ವಾರಂಟೈನ್​ ಆಗಿದೆ. ಇತ್ತ ಇವರ ಕ್ವಾರಂಟೈನ್ ಅವಧಿ ಮುಗಿಯುವ ವರೆಗೂ ಸಿನಿಮಾ ಶೂಟಿಂಗ್​ ಸ್ಥಗಿತಗೊಳಿಸಲಾಗಿದೆ.

ಧರ್ಮ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ವರುಣ್​ ಧವನ್ ನಾಯಕನಾಗಿ ನಟಿಸಿದರೆ, ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಲಿದ್ದಾರೆ. ಅನಿಲ್ ಕಪೂರ್​ ಮತ್ತು ನೀತು ಕಪೂರ್, ವರುಣ್​ ಧವನ್ ಪೋಷಕರಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ 2021ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net