More

    ‘ಅಣ್ಣಾತ್ತೈ’ ನಂತರ ನಟನೆಗೆ ಬ್ರೇಕ್​ ಹಾಕುತ್ತಾರಾ ರಜನಿಕಾಂತ್​?

    ಚೆನ್ನೈ: ಡಿಸೆಂಬರ್​ 31ಕ್ಕೆ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸುವುದಾಗಿ ತಮಿಳು ಸೂಪರ್​ಸ್ಟಾರ್​ ರಜನಿಕಾಂತ್​ ಘೋಷಿಸಿದ್ದು, ಅವರ ಅಭಿಮಾನಿಗಳಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಏಕೆಂದರೆ, ರಜನಿಕಾಂತ್​ ಅವರು ರಾಜಕೀಯಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳಿಗ ಹಲವು ವರ್ಷಗಳ ಆಸೆಯಾಗಿತ್ತು.

    ಒಂದು ಕಡೆ, ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದರೆ, ಇನ್ನೊಂದು ಕಡೆ ಅವರು ಇನ್ನು ಮುಂದೆ ನಟಿಸುತ್ತಾರಾ, ಇಲ್ಲವಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಎದುರಾಗಿದೆ.

    ಇದನ್ನೂ ಓದಿ: ತಾಕತ್ತಿದ್ರೆ ನಮ್ಮಲ್ಲಿಗೆ ಬರಲಿ; ನಟಿ ಕಂಗನಾಗೆ ಚಾಲೆಂಜ್​, ಅವರ ಸಿನಿಮಾಗಳಿಗೆ ಬಹಿಷ್ಕಾರ

    ಎಲ್ಲರಿಗೂ ಗೊತ್ತಿರುವಂತೆಯೇ, ರಜನಿಕಾಂತ್​ ಅವರು ಸದ್ಯ ‘ಅಣ್ಣಾತ್ತೈ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಅರ್ಧ ಭಾಗದ ಚಿತ್ರೀಕರಣ ಮುಗಿದಿದ್ದು, ಮಿಕ್ಕ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಐಡಿಯಾ. ಈ ಮೊದಲು, ಕರೊನಾಗೆ ಔಷಧಿ ಕಂಡುಹಿಡಿಯುವವರೆಗೂ ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂದು ಅವರು ತೀರ್ಮಾನಿಸಿದ್ದರು. ಆದರೆ, ಇದೀಗ ಚುನಾವಣೆಗಳು ಮುಂದಿನ ವರ್ಷ ನಡೆಯಬೇಕಿರುವುದರಿಂದ, ಅಷ್ಟರಲ್ಲಿ ಅವರು ಚಿತ್ರದ ಕೆಲಸ ಮುಗಿಸಿ, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಹಾಗಾಗಿ ಆದಷ್ಟು ಬೇಗ ಅವರು ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಅವರು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇನ್ನು, ‘ಅಣ್ಣಾತ್ತೈ’ ನಂತರ ಅವರು ನಟನೆ ಮುಂದುವರೆಸುತ್ತಾರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಏಕೆಂದರೆ, ಒಂದು ಪಕ್ಷ ರಜನಿಕಾಂತ್​ ಅವರು ಚುನಾವಣೆಗಳಲ್ಲಿ ಮಹತ್ವದ ಪಾತ್ರವಹಿಸಿ, ಅವರ ಪಕ್ಷ ಅಧಿಕಾರಕ್ಕೆ ಬರುವಂತಾದರೆ, ಅವರು ಚಿತ್ರರಂಗದಲ್ಲಿ ಮುಂದುವರೆಯುವುದು ಕಷ್ಟ. ಇನ್ನು ರಾಜಕೀಯದಲ್ಲಿ ಅವರದ್ದು ಹೊಸ ಪಕ್ಷವಾಗಿರುವುದರಿಂದ, ಅಷ್ಟೇನೂ ಯಶಸ್ವಿಯಾಗದಿದ್ದರೆ, ಅವರು ಮುಂದೆ ಬಣ್ಣ ಹಚ್ಚುವ ಸಾಧ್ಯತೆ ಇದೆ. ಆದರೆ, ಅದಕ್ಕೂ ಮುನ್ನ ‘ಅಣ್ಣಾತ್ತೈ’ ಚಿತ್ರವನ್ನು ಅಚ್ಚುಕಟ್ಟಾಗಿ ಮುಗಿಸಿಕೊಡಬೇಕು ಎಂಬುದು ಅವರ ಯೋಚನೆ. ಈ ನಿಟ್ಟಿನಲ್ಲಿ ಅವರು ಹೆಜ್ಜೆ ಇಟ್ಟಿದ್ದು, ಆದಷ್ಟು ಬೇಗ ಚಿತ್ರದಲ್ಲಿನ ತಮ್ಮ ಕೆಲಸಗಳನ್ನು ಮುಗಿಸುವುದಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಸಂಭಾವನೆ ಕಡಿಮೆ ಮಾಡಿಕೊಂಡ್ರು ಪೂಜಾ … ಯಾಕೆ?

    ಅಂದಹಾಗೆ, ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣ ಈಗಾಗಲೇ ಹೈದರಾಬಾದ್​ನಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಪ್ರಗತಿಯಲ್ಲಿರುವಾಗಲೇ, ಲಾಕ್​ಡೌನ್​ ಘೋಷಣೆಯಾಯಿತು. ಹಾಗಾಗಿ ಚಿತ್ರತಂಡ ಅರ್ಧಕ್ಕೇ ನಿಲ್ಲಿಸಿ, ಚೆನ್ನೈಗೆ ವಾಪಸ್ಸಾಗಬೇಕಾಯಿತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರೀಕರಣ ಇನ್ನೂ ಮುಗಿದಿಲ್ಲವಾದ್ದರಿಂದ ಮತ್ತು ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇರುವುದರಿಂದ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಚಿತ್ರ ಬಿಡಗುಡೆಯಾಗುವ ಸಾಧ್ಯತೆ ಇದೆ.

    ಚಿತ್ರ ಮಾಡೋದಕ್ಕೆ ಕಾಸರವಳ್ಳಿ ಅವರಿಗೆ ಅಂಜಿಕೆ ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts