ಅವಳೇನು ಬೆತ್ತಲೆ ಹೋಗಿಲ್ಲ... ಕೆಲ ದಡ್ಡರಿಗೆ ಹನಿ ರೋಸ್​ ಅವರ ದೇಹಾಕೃತಿಯೇ ದೊಡ್ಡ ಸಮಸ್ಯೆಯಾಗಿದೆ! Honey Rose​

Honey Rose​
Published on

Honey Rose : ಮಲಯಾಳಂ ನಟಿ ಹನಿ ರೋಸ್ ದಾಖಲಿಸಿದ ಲೈಂಗಿಕ ಕಿರುಕುಳ ದೂರಿನ ಆಧಾರದ ಮೇಲೆ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್​ ಅವರನ್ನು ಬಂಧಿಸಲಾಗಿದ್ದು, ಈ ಸುದ್ದಿ ಕೇರಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಎಲ್ಲರು ಹನಿ ರೋಸ್ ಅವರನ್ನು ಕೊಂಡಾಡುತ್ತಿದ್ದಾರೆ. ಇದರ ನಡುವೆ ನಟ ಹಾಗೂ ನಿರ್ದೇಶಕ ಅಲೆಪ್ಪಿ ಅಶ್ರಫ್ ಅವರು ಹನಿ ರೋಸ್ ಅವರ ಡ್ರೆಸ್ಸಿಂಗ್ ಶೈಲಿಯ ಬಗ್ಗೆ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಉಡುಗೆಯು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿತ್ತು. ಆದರೆ, ಇಂದಿನ ಹೊಸ ಪೀಳಿಗೆಗೆ, ಬಟ್ಟೆ ಸ್ವಾತಂತ್ರ್ಯದ ಸಂಕೇತವಾಗಿದೆ. ಅವರು ಏನು ಧರಿಸಬೇಕೆಂದು ಆಯ್ಕೆ ಮಾಡಿಕೊಳ್ಳುವುದು ಅವರ ಸ್ವಾತಂತ್ರ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಬಟ್ಟೆ, ಆಹಾರ ಮತ್ತು ಭಾಷೆಯನ್ನು ಆಕ್ರಮಿಸಿಕೊಂಡಿದೆ. ಈ ಹಿಂದೆ ಹರಿದ ಬಟ್ಟೆಗಳನ್ನು ಹೊಲಿಯಲಾಗುತ್ತಿತ್ತು ಮತ್ತು ಬಳಸಲಾಗುತ್ತಿತ್ತು. ಇಂದು, ಹೊಲಿದ ಬಟ್ಟೆಗಳನ್ನು ಹರಿದು ಫ್ಯಾಷನ್ ಹೆಸರಿನಲ್ಲಿ ಬಳಸಲಾಗುತ್ತಿದೆ ಎಂದರು.

Honey Rose 4

ಒಬ್ಬ ಪ್ರಮುಖ ನಟನ ನಾಲ್ವರು ಹೆಣ್ಣುಮಕ್ಕಳು ತಮ್ಮ ಇಷ್ಟದ ಬಟ್ಟೆಗಳನ್ನು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ ವಿವಿಧ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್‌ಗಳಿಗೆ ಬಂದ ಕಾಮೆಂಟ್‌ಗಳನ್ನು ನಾನು ಓದಿದ್ದೇನೆ. ಕೆಲವು ನೆಟ್ಟಿಗರು ನಿಮ್ಮ ತಾಯಿಯೂ ಅಂತಹ ಬಟ್ಟೆಗಳನ್ನು ಧರಿಸುತ್ತಾರೆಯೇ ಎಂದು ಹೆಣ್ಣುಮಕ್ಕಳನ್ನು ಕೇಳಿದ್ದಾರೆ. ಬಹುಶಃ ಆ ಹೆಣ್ಣುಮಕ್ಕಳ ಕುಟುಂಬವು ಅಂತಹ ಕಾಮೆಂಟ್‌ಗಳನ್ನು ನಿರ್ಲಕ್ಷಿಸಿರಬಹುದು. ಕೆಲವು ಮಾಲ್‌ಗಳಲ್ಲಿ ಯುವತಿಯರು ಧರಿಸುವ ಬಟ್ಟೆಗಳನ್ನು ನೋಡಿ ನನಗೆ ಆಶ್ಚರ್ಯವಾಗಿದೆ.

ಈ ಮಧ್ಯೆ ಹನಿ ರೋಸ್ ಅವರ ಉಡುಗೆ ತೊಡುಗೆ ಸರಿಯಿಲ್ಲ ಎಂದು ಕೆಲವರು ಕೂಗಾಡುತ್ತಿದ್ದಾರೆ. ಯಾವ ನಟಿಯೂ ಉದ್ಘಾಟನಾ ಸಮಾರಂಭಕ್ಕೆ ಬೆತ್ತಲೆಯಾಗಿ ಹೋಗುವುದನ್ನು ನೋಡಿಲ್ಲ. ಕೆಲವು ಸಮಯದ ಹಿಂದೆ ಟೊಪ್ಪಿ ಎಂಬ ಯೂಟ್ಯೂಬರ್ ತೋರಿಸಿದ ಆಕ್ರೋಶವನ್ನು ನೀವು ಮರೆತಿರಲಿಕ್ಕಿಲ್ಲ. ಗೌರವದಿಂದ ತಿನ್ನುವುದು ನಮ್ಮ ಸಂಸ್ಕೃತಿಯಾಗಿ. ಆದರೆ ಟೊಪ್ಪಿ ಏನು ಮಾಡಿದನು? ಎಂಬುದು ನಿಮಗೆ ಗೊತ್ತಿದೆ. ಅವನು ಆಹಾರವನ್ನು ತನ್ನ ಒಳ ಉಡುಪುಗಳಲ್ಲಿ ಇರಿಸಿ, ತಿನ್ನುತ್ತಾನೆ. ಅಲ್ಲದೆ, ಆಹಾರವನ್ನು ನೆಲದ ಮೇಲೆ ಒದ್ದು ತುಳಿಯುತ್ತಾನೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸನ್ನೆಗಳನ್ನು ಸಹ ತೋರಿಸುತ್ತಾನೆ. ಅಂತಹ ವ್ಯಕ್ತಿಯನ್ನು ಉದ್ಘಾಟನಾ ಸಮಾರಂಭಗಳಲ್ಲಿ ಸೆಲೆಬ್ರಿಟಿ ಎಂದೂ ಕರೆಯುತ್ತಾರೆ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದು ಅವರ ಸ್ವಾತಂತ್ರ್ಯವಲ್ಲವೇ? ಇಂತಹ ಪ್ರಕರಣಗಳಲ್ಲಿ ಹೊಸ ಪೀಳಿಗೆಯಲ್ಲಿ ಬದಲಾವಣೆ ನೋಡಬೇಕಿದೆ.

Honey Rose 1

ಹನಿ ರೋಸ್ ಕಡೆಯಿಂದ ಎಂದಿಗೂ ಅಶ್ಲೀಲ ಸನ್ನೆ ಅಥವಾ ಮಾತುಗಳು ಬಂದಿಲ್ಲ. ಹನಿ ರೋಸ್​ ಅವರ ದೇಹಾಕೃತಿ ಮತ್ತು ಪೃಷ್ಠಗಳೇ ಕೆಲ ದಡ್ಡರಿಗೆ ಮುಖ್ಯ ಸಮಸ್ಯೆಯಾಗಿದೆ. ಹನಿ ರೋಸ್ ಅನ್ನು ದೂಷಿಸುವವರು ಹೊಸ ಪೀಳಿಗೆಯನ್ನು ನೋಡಿ ಕಲಿತರೆ ಒಳ್ಳೆಯದು. ಇಂದಿನ ಹುಡುಗಿಯರು ಕಡಿಮೆ ಬಟ್ಟೆ ಧರಿಸಿ ತಿರುಗಾಡಲು ಬಯಸುತ್ತಾರೆ. ಅದು ಅವರ ಇಷ್ಟ. ಅದಕ್ಕಾಗಿ ಅವರ ಕುಟುಂಬ ಸದಸ್ಯರು, ತಂದೆ ಮತ್ತು ತಾಯಿಯನ್ನು ಅವಮಾನಿಸುವುದರಲ್ಲಿ ಏನಾದರೂ ಅರ್ಥವಿದೆಯೇ ಎಂದು ಅಶ್ರಫ್​ ಪ್ರಶ್ನೆ ಮಾಡಿದ್ದಾರೆ.

ನಟಿ ಸನ್ನಿ ಲಿಯೋನ್ ಕೇರಳಕ್ಕೆ ಬಂದಾಗ, ಅವರನ್ನು ನೋಡಲು ಲಕ್ಷಾಂತರ ಜನರು ನೆರೆದಿದ್ದರು. ಅವರೆಲ್ಲ ಸನ್ನಿ ಲಿಯೋನ್ ಅವರ ಭಾಷಣವನ್ನು ಕೇಳಲು ಅಲ್ಲಿಗೆ ಬರಲಿಲ್ಲ. ಬದಲಾಗಿ ತಮ್ಮ ಚಿತ್ರಗಳಲ್ಲಿ ಸನ್ನಿ ಲಿಯೋನ್​ ಪ್ರದರ್ಶಿಸಿದ ಸೌಂದರ್ಯವನ್ನು ನೋಡಲು ಮತ್ತು ಆನಂದಿಸಲು ಬಂದಿದ್ದರು. ಯಾವುದೇ ನೀತಿವಾದಿಗಳು ಸನ್ನಿ ಲಿಯೋನ್​ ಅವರ ಉಡುಗೆ ತೊಡುಗೆ ಕೆಟ್ಟದಾಗಿದೆ ಎಂದು ಹೇಳಲಿಲ್ಲ. ಯಾರೇ ಆಗಲಿ ತಮ್ಮ ವಿರುದ್ಧದ ಸೈಬರ್ ದಾಳಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ್ದರೆ, ಸಮಸ್ಯೆ ಇನ್ನಷ್ಟು ಹದಗೆಡುತ್ತದೆ. ಆದ್ದರಿಂದ, ಅಗತ್ಯವಿರುವಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಿ ಎನ್ನುವ ಮೂಲಕ ಹನಿ ರೋಸ್​ಗೆ ಅಶ್ರಫ್ ಬೆಂಬಲ ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net