ಕೆಟ್ಟ ಥಂಬ್​ನೇಲ್​ಗಳ ವಿರುದ್ಧ ಸಮರ ಸಾರಿದ ಹನಿ ರೋಸ್​! ಪೊಲೀಸರ ಕೈ ಸೇರಿತು 20 ಯೂಟ್ಯೂಬರ್ಸ್​ ಜಾತಕ | Honey Rose

Honey Rose
Published on

Honey Rose : ಸಾಮಾಜಿಕ ಜಾಲತಾಣ ಮೂಲಕ ತನ್ನನ್ನು ನಿಂದಿಸಿದ ಯೂಟ್ಯೂಬರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಲಯಾಳಂ ನಟಿ ಹನಿ ರೋಸ್ ಮುಂದಾಗಿದ್ದಾರೆ. ಯೂಟ್ಯೂಬರ್​ಗಳಿಗೆ ಶಾಕ್​ ಕೊಡಲು ಸಿದ್ಧತೆಯನ್ನು ಕೈಗೊಂಡಿದ್ದಾರೆ.

ತನ್ನ ವಿಡಿಯೋಗಳಿಗೆ ಕೆಟ್ಟ ಥಂಬ್‌ನೇಲ್‌ಗಳನ್ನು ಪೋಸ್ಟ್ ಮಾಡಿ, ಜನರ ದಾರಿ ತಪ್ಪಿಸುತ್ತಿರುವ ಯೂಟ್ಯೂಬರ್​ಗಳ ವಿರುದ್ಧ ಹನಿ ರೋಸ್​ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಪೊಲೀಸರಿಗೆ 20 ಯೂಟ್ಯೂಬ್ ಚಾನೆಲ್‌ಗಳ ವಿವರಗಳನ್ನು ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

ಇದರ ನಡುವೆ ತಮ್ಮ ಮೇಲೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆಂದು ಹನಿ ರೋಸ್ ನೀಡಿರುವ ದೂರಿನ ಆಧಾರದ ಮೇಲೆ ಖ್ಯಾತ ಉದ್ಯಮಿ ಬಾಬಿ ಚೆಮ್ಮನ್ನೂರ್ ಬಂಧನವಾಗಿದ್ದು, ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಬಾಬಿಯನ್ನು ಬೆಳಗ್ಗೆ 11 ಗಂಟೆಗೆ ಎರ್ನಾಕುಲಂ ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ.

ನಿನ್ನೆ ರಾತ್ರಿ ಸುಮಾರು 11.45ಕ್ಕೆ ವೈದ್ಯಕೀಯ ಪರೀಕ್ಷೆ ಮುಗಿಸಿದ ನಂತರ, ಬಾಬಿ ಚೆಮ್ಮನ್ನೂರ್ ಅವರು ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ರಾತ್ರಿ ಕಳೆದರು. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅವರನ್ನು ಮತ್ತೆ ವೈದ್ಯಕೀಯ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಬಿಯ ಫೋನ್ ಅನ್ನು ವಶಪಡಿಸಿಕೊಂಡಿರುವ ತನಿಖಾ ತಂಡ, ಬಾಬಿಯನ್ನು ವಿವರವಾಗಿ ಪ್ರಶ್ನಿಸಿದೆ. ಬಾಬಿ ನಿಯಮಿತವಾಗಿ ಬಳಸುತ್ತಿದ್ದ ಐಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಬಾಬಿ ಚೆಮ್ಮನ್ನೂರ್​ ಅವರು ಕೊಯಮತ್ತೂರಿನಲ್ಲಿರುವ ಹೊಸ ಆಭರಣ ಅಂಗಡಿಯನ್ನು ಉದ್ಘಾಟಿಸಲು ಹೋಗುತ್ತಿದ್ದಾಗ ವಯನಾಡಿನಲ್ಲಿ ಬಂಧಿಸಲಾಯಿತು. ಬಾಬಿ ಚೆಮ್ಮನ್ನೂರ್ ಮತ್ತು ನಟಿ ಹನ್ಸಿಕಾ ಅಂಗಡಿಯನ್ನು ಉದ್ಘಾಟಿಸಬೇಕಿತ್ತು. ಬಾಬಿಯನ್ನು ವಶಕ್ಕೆ ಪಡೆದಿದ್ದರೂ, ಉದ್ಘಾಟನಾ ಸಮಾರಂಭವನ್ನು ಕೊಯಮತ್ತೂರಿನಲ್ಲಿ ನಡೆಸಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net