

ಕರೊನಾದಿಂದಾಗಿ ಎಷ್ಟೋ ಮದುವೆಗಳು, ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಬಾಲಿವುಡ್ನಲ್ಲಿ ನಡೆಯಬೇಕಿದ್ದ ಸ್ಟಾರ್ ಜೋಡಿಗಳ ಮದುವೆ ಸಹ ಮುಂದೂಡಲಾಗಿದೆ. ಅಲಿ ಫೈಝಲ್, ವರುಣ್ ಧವನ್ ಮದುವೆ ಪೋಸ್ಟ್ಪೋನ್ ಮಾಡಿಕೊಂಡಿದ್ದಾರೆ. ಹೀಗಿರುವಾಗಲೇ ಟಾಲಿವುಡ್ ನಟ ನಿತಿನ್ ಮದುವೆ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ರಾಗಿಣಿ ಚಂದ್ರನ್ ಲಾ… ಕುತೂಹಲ…
ಹೌದು, ಕರೊನಾ ಹಾವಳಿ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ನಿತಿನ್ಮದುವೆ ಮುಗಿರುತ್ತಿತ್ತು. ಆದರೆ, ಕರೊನಾ ಹಾವಳಿ ಕಡಿಮೆ ಆಗುತ್ತದೆ ಎಂದು ಮುಂದೂಡತ್ತಲೇ ಬರಬೇಕಾಯಿತು. ಇದೀಗ ಕೊನೆಗೂ ಮದುವೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಜುಲೈ 26ರಂದು ಹೈದರಾಬಾದ್ನಲ್ಲಿ ವಿವಾಹ ಕಾರ್ಯಕ್ರಮ ನೆರವೇರಲಿದೆ.
ಇದನ್ನೂ ಓದಿ: ಹಿಂದಿ ಬೆಲ್ ಬಾಟಂಗೆ ವಾಣಿ ರಾಣಿ
ಒಂದಷ್ಟು ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುವ ಮೂಲಕ ಸರಳತೆಯ ಮೊರೆ ಹೋಗುವ ಪ್ಲಾನ್ ಹಾಕಲಾಗಿದ್ದು, ಹೈದರಾಬಾದ್ನ ತಾಜ್ ಫಾಲುಕ್ನುಮಾ ಹೊಟೇಲ್ನಲ್ಲಿ ಮದುವೆ ನಡೆಯಲಿದೆ. ಕಳೆದ ಫೆಬ್ರವರಿ 5 ರಂದು ಶಾಲಿನಿ ಕಂದುಕುರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿತಿನ್, ಮೇ ತಿಂಗಳಲ್ಲಿ ಮದುವೆಯಾಗುವ ಬಗ್ಗೆ ಹೇಳಿಕೊಂಡಿದ್ದರು.
ಇನ್ನು ನಿತಿನ್ ಆಯ್ಕೆ ಮಾಡಿಕೊಂಡಿರುವ ಕಲ್ಯಾಣ ಮಂಟಪದಲ್ಲಿಯೇ, ಆಗಸ್ಟ್ 8ರಂದು ರಾಣಾ ಸಹ ಮದುವೆಯಾಗಲಿದ್ದಾರೆ. (ಏಜೆನ್ಸೀಸ್)