ತೋಟದ ಮನೆಯಲ್ಲಿ ಪತ್ನಿ ಕೈ ಹಿಡಿದು ಹೊರಟ ನಿಖಿಲ್ ...

Nikhil Kumar Final
Published on

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್, ಬಿಡದಿಯ ತಮ್ಮ ತೋಟದ ಮನೆಯಲ್ಲಿ ಹೆಂಡತಿ ಕೈ ಹಿಡಿದು ಹೋಗುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಿಖಿಲ್ ಮತ್ತು ರೇವತಿ ಅವರ ಮದುವೆ ಏಪ್ರಿಲ್ ತಿಂಗಳಿನಲ್ಲಷ್ಟೇ ನಡೆದಿತ್ತು. ಈ ಮದುವೆಯನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಕುಮಾರಸ್ವಾಮಿ ಅವರು ಮುಂಚೆ ಪ್ಲಾನ್ ಮಾಡಿದ್ದರಾದರೂ, ಲಾಕ್‌ಡೌನ್ ಇದ್ದಿದ್ದರಿಂದ, ಅವರು ಅಂದುಕೊಂಡಂತೆ ಆಗಲಿಲ್ಲ. ಕೊನೆಗೆ ಈ ಮದುವೆ, ರಾಮನಗರದ ಅವರ ಾರ್ಮ್ ಹೌಸ್‌ನಲ್ಲಿ ಸರಳವಾಗಿ ನೆರವೇರಿತ್ತು.

ಮದುವೆಯ ನಂತರ ನಿಖಿಲ್ ತಮ್ಮ ಪತ್ನಿಯ ಜತೆಗಿರುವ ಹಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಹಲವರಿಗೆ, ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಇದೀಗ ಅವರು ತಮ್ಮ ಬಿಡದಿ ತೋಟದ ಮನೆಯಲ್ಲಿ, ಹೆಂಡತಿಯ ಕೈ ಹಿಡಿದು ಹೊರಟಿರುವ ಫೋಟೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಈ ಫೋಟೋ, ಸಖತ್ ವೈರಲ್ ಆಗಿದೆ.

ವಿಜಯಕುಮಾರ್ ಕೊಂಡಾ ನಿರ್ದೇಶನದ ಹೊಸ ಚಿತ್ರದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆಯಡಿ ಲಹರಿ ವೇಲು ನಿರ್ಮಿಸುತ್ತಿದ್ದಾರೆ. ಮಾರ್ಚ್‌ನಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತಾದರೂ, ಲಾಕ್‌ಡೌನ್‌ನಿಂದಾಗಿ ಚಿತ್ರೀಕರಣ ನಿಂತಿದೆ. ಲಾಕ್‌ಡೌನ್ ಮುಗಿದ ನಂತರ ಈ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ.

ಇದಲ್ಲದೆ ಇನ್ನೂ ಎರಡ್ಮೂರು ಚಿತ್ರಗಳಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶನದ ಹೊಸ ಚಿತ್ರವಲ್ಲದೆ, ಮುನಿರತ್ನ ನಿರ್ಮಾಣದ ಚಿತ್ರದಲ್ಲೂ ನಿಖಿಲ್ ಮುಂದಿನ ದಿನಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net