‘ಮಗಳು ಜಾನಕಿ’ ಬಗ್ಗೆ ಟಿ.ಎನ್. ಸೀತಾರಾಂ ಹೇಳಿದ್ದೇನು?

Magalu Janaki - Final
Published on

ಕಳೆದ ಕೆಲವು ದಿನಗಳಿಂದ ಕಲರ್ಸ್‌ ಸೂಪರ್ ಚಾನಲ್ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಪ್ರಮುಖವಾಗಿ ಕಲರ್ಸ್‌ ಸೂಪರ್ ನಿಂತು ಹೋಗುತ್ತದಂತೆ, ಆ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳನ್ನು ನಿಲ್ಲಿಸಲಾಗುತ್ತದಂತೆ ಎಂಬ ಸುದ್ದಿಗಳು ಚಾಲ್ತಿಯಲ್ಲಿದ್ದವು.

ಆದರೆ, ಈ ಬಾಗ್ಗೆ ಕಲರ್ಸ್‌ ಚಾನಲ್‌ನವರು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ. ಚಾನಲ್ ಪ್ರಸಾರ ಮುಂದುವರೆಯುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಇದೀಗ, ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾದ ‘ಮಗಳು ಜಾನಕಿ’ ಪ್ರಸಾರ ನಿಲ್ಲುತ್ತಿದೆ ಎಂದು ಸ್ವತಃ ಅದರ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಲರ್ಸ್‌ ಸೂಪರ್ ವಾಹಿನಿಯು ಅಕ್ಟೋಬರ್‌ವರೆಗೂ ತಾತ್ಕಾಲಿವಾಗಿ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂ ಅವರು, ‘ಮಗಳು ಜಾನಕಿ’ ಧಾರಾವಾಹಿಯ ಪ್ರಸಾರ ನಿಲ್ಲುತ್ತಿರುವುದಾಗಿ ಅಧಿಕೃತವಾಗಿ ಬರೆದುಕೊಂಡಿದ್ದಾರೆ. ಅದಕ್ಕೆ ಮುಂಚೆ ಜೂನ್ ಒಂದರಿಂದ ರಾತ್ರಿ 9.30ಕ್ಕೆ, ಈ ಹಿಂದೆ ಚಿತ್ರೀಕರಣ ಮಾಡಲಾಗಿದ್ದ ‘ಮಗಳು ಜಾನಕಿ’ಯ ಹೊಸ ಎಪಿಸೋಡುಗಳನ್ನು ಸುಮಾರು ಎರಡು ವಾರಗಳ ಕಾಲ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಧಾರಾವಾಹಿಯನ್ನು ನೋಡಿ ಪ್ರೋತ್ಸಾಹಿಸಿದವರೆಲ್ಲರಿಗೂ ಅವರು ಧನ್ಯವಾದಗಳನ್ನು ತಿಳಿಸುವುದರ ಜತೆಗೆ, ಆ ಧಾರಾವಾಹಿಯನ್ನು ಬೇರೆ ಯಾವುದೇ ಚಾನಲ್‌ಗಳಲ್ಲೂ ಪ್ರಸಾರ ಮಾಡುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆಂದಾದರೂ, ಈ ಬಗ್ಗೆ ಮಾತನಾಡುವುದಾಗಿ ತಮ್ಮ ಪೋಸ್ಟ್ ಮುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net