ಶಾರೂಖ್​ ಪುತ್ರ ಆರ್ಯನ್​-ಐಶ್ವರ್ಯಾ ಪುತ್ರಿ ಆರಾಧ್ಯ ಮದುವೆ!? ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ

Aryan Khan
Published on

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್ ಅವರ​ ಪುತ್ರ ಆರ್ಯನ್​ ಖಾನ್​ ಮತ್ತು ಬಾಲಿವುಡ್​ ಬ್ಯೂಟಿ ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಬಚ್ಚನ್​ಗೆ ಸಂಬಂಧಿಸಿದ ಹೊಸ ಪೋಸ್ಟರ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿವಾದದ ಕಿಡಿ ಹೊತ್ತಿಸಿದೆ ಮತ್ತು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಯಾನ್​​ ಪೇಜ್​ನಲ್ಲಿ ಆರ್ಯನ್​ ಖಾನ್​ ಮತ್ತು ಆರಾಧ್ಯಾ ಬಚ್ಚನ್​ರನ್ನು ದಂಪತಿ ಎಂಬಂತೆ ಬಿಂಬಿಸಲಾಗಿದೆ. ಇಬ್ಬರ ನಡುವಿನ ಭಾರಿ ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ ರೊಮ್ಯಾಂಟಿಕ್​ ಸನ್ನಿವೇಶಗಳಲ್ಲಿ ಇಬ್ಬರನ್ನು ಚಿತ್ರಿಸಿರುವ ವಿವಿಧ ಪೋಸ್ಟ್‌ಗಳನ್ನು ಫ್ಯಾನ್​​ ಪೇಜ್​ ಒಳಗೊಂಡಿದೆ. ಅದರಲ್ಲಿ ಮದುವೆ ಧಿರಿಸಿನಲ್ಲಿ ಒಟ್ಟಿಗೆ ಪೋಸ್​ ನೀಡಿರುವ ರೀತಿಯಲ್ಲೂ ಎಡಿಟ್​ ಮಾಡಲಾಗಿದೆ. ಇದೇ ಪೋಸ್ಟ್​ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನೆಟ್ಟಿಗರ ಆಕ್ರೋಶ

ವೈರಲ್​ ಆಗುತ್ತಿರುವ ಪೋಸ್ಟ್​ಗಳಿಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನೇಕರು ಫ್ಯಾನ್ಸ್​ ಪೇಜ್​ ಮೇಲೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗಳ ನಿಜಕ್ಕೂ ಅಸಭ್ಯವಾಗಿವೆ. ದುರುದ್ದೇಶಪೂರ್ವಕವಾಗಿಯೇ ಈ ರೀತಿ ಎಡಿಟ್​ ಮಾಡಿದ್ದಾರೆ ಎಂದು ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ಬಾಲಿವುಡ್ ಇಂಡಸ್ಟ್ರಿಯಲ್ಲಿ ಖಾನ್ ಮತ್ತು ಬಚ್ಚನ್ ಕುಟುಂಬಗಳೆರಡೂ ಗೌರವಾನ್ವಿತವಾಗಿವೆ. ಅಮಿತಾಬ್ ಮತ್ತು ಜಯಾ ಬಚ್ಚನ್, ಶಾರುಖ್ ಖಾನ್ ಅವರನ್ನು ಮಗನಂತೆ ಪರಿಗಣಿಸುತ್ತಾರೆ ಎಂದು ವರದಿಯಾಗಿದೆ. ಇದೀಗ ಆರ್ಯನ್ ಖಾನ್ ಮತ್ತು ಆರಾಧ್ಯ ಬಚ್ಚನ್ ಇಬ್ಬರನ್ನು ರೊಮ್ಯಾಂಟಿಕ್ ಕಪಲ್​ ಆಗಿ ಬಿಂಬಿಸಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಸೆಲೆಬ್ರಿಟಿಗಳ ವೈಯಕ್ತಿಕ ಜೀವನವನ್ನು ಗೌರವಿಸಬೇಕಾದ ಅಭಿಮಾನಿಗಳ ಜವಾಬ್ದಾರಿ ಮತ್ತು ಅಭಿಮಾನಿಗಳ ಮಿತಿಯ ಬಗ್ಗೆ ಈ ವಿವಾದವು ಚರ್ಚೆ ಹುಟ್ಟುಹಾಕಿದೆ. ಸಭ್ಯತೆಯ ಎಲ್ಲೆಯನ್ನು ಮೀರುವ ವಿಷಯಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡಬೇಕಾದ ಸಾಮಾಜಿಕ ಜಾಲತಾಣ ವೇದಿಕೆಗಳ ಜವಾಬ್ದಾರಿಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಸೋಶಿಯಲ್ ಮೀಡಿಯಾ ಯುಗದಲ್ಲಿ ಸೆಲೆಬ್ರಿಟಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಈ ವಿವಾದವು ಬೆಳಕಿಗೆ ತಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net