More

    ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ ನಟ ಸಿದ್ಧಾರ್ಥ್​ ಮೊದಲ ಪತ್ನಿ! ಇಬ್ಬರು ಡಿವೋರ್ಸ್​ ಆಗಿದ್ದೇಕೆ?

    ಚೆನ್ನೈ: ನಟ ಸಿದ್ಧಾರ್ಥ್​ ಮತ್ತು ನಟಿ ಅದಿತಿ ರಾವ್ ಗುಟ್ಟಾಗಿ ಎರಡನೇ ಮದುವೆಯಾದ ಸುದ್ದಿ ಕೆಲವು ದಿನಗಳ ಹಿಂದೆ ಭಾರಿ ಸುದ್ದಿಯಾಗಿತ್ತು. ಆದರೆ, ಮದುವೆಯಾಗಿಲ್ಲ ಅದು ಇಬ್ಬರ ನಿಶ್ಚಿತಾರ್ಥ ಎಂದು ತಾರಾಜೋಡಿ ಸ್ಪಷ್ಟನೆ ನೀಡಿತು. ಇಬ್ಬರು ಬಹಳ ಸಮಯದಿಂದ ಲಿವಿಂಗ್​ ಟುಗೆದರ್​ನಲ್ಲಿದ್ದರು. ಇದೀಗ ಮದುವೆಯ ಹೊಸ್ತಿಲಲ್ಲಿರುವ ತಾರಾ ಜೋಡಿ ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ.

    ಅಂದಹಾಗೆ ಆದಿತಿ ಮತ್ತು ಸಿದ್ಧಾರ್ಥ್​ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಹಾಗಾದರೆ, ಸಿದ್ಧಾರ್ಥ್​ ಅವರ ಮೊದಲ ಪತ್ನಿ ಯಾರು? ನೋಡಲು ಹೇಗಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದರ ನಡುವೆ ಸಿದ್ಧಾರ್ಥ್​ ಅವರ ಮೊದಲ ಹೆಂಡತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಅಂದಹಾಗೆ ಸಿದ್ಧಾರ್ಥ್​ ಅವರು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಜತೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಕೊನೆಯದಾಗಿ ಚಿತ್ತ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಸಿನಿಮಾಗೆ ಸಿದ್ಧಾರ್ಥ್​ ಅವರೇ ಬಂಡವಾಳ ಹೂಡಿದ್ದರು. ಕಮಲ್​ ಹಾಸನ್​ ನಟನೆಯ ಇಂಡಿಯನ್​ 2 ಸಿನಿಮಾದಲ್ಲಿ ಸಿದ್ಧಾರ್ಥ್​ ನಟಿಸುತ್ತಿದ್ದಾರೆ.

    ಇನ್ನು ಸಿದ್ಧಾರ್ಥ್​ ಅವರ ಮೊದಲ ಪತ್ನಿಯ ವಿಚಾರಕ್ಕೆ ಬರುವುದಾದರೆ, ಆಕೆಯ ಹೆಸರು ಮೇಘನಾ ನಾರಾಯಣ್​. 2003ರಲ್ಲಿ ಸಿದ್ಧಾರ್ಥ್​ ಮತ್ತು ಮೇಘನಾ ಮದುವೆಯಾದರು. ಆದರೆ, ಮನಸ್ತಾಪಗಳ ಕಾರಣದಿಂದಾಗಿ 2007ರಲ್ಲಿ ಡಿವೋರ್ಸ್​ ಆದರು. ಇದೀಗ ಮೇಘನಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    Siddharth Fist Wife

    ಇನ್ನು ಸಿದ್ಧಾರ್ಥ್​ ಮತ್ತು ಆದಿತಿ ಅವರು ಎರಡನೇ ಮದುವೆ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ. ಮಾರ್ಚ್ 27ರಂದು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. (ಏಜೆನ್ಸೀಸ್​)

    ಸಿದ್ಧಾರ್ಥ್, ಅದಿತಿ ರಾವ್ ಮದುವೆ ಆಗಿಲ್ಲ; ಇದು ಎಂಗೇಜ್‌ ಮೆಂಟ್‌ ಎಂದ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts