

ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರರಂಗದಲ್ಲೂ ಕಾದಂಬರಿ ಆಧಾರಿತ ಚಿತ್ರಗಳು ಸದ್ದು ಮಾಡುತ್ತಿರುತ್ತವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ‘ನೆನಪು ಮರುಕಳಿಸಿದಾಗ’. ಶಿರಾ ಕರಾವರಹಳ್ಳಿಯ ಡಿ.ಎಸ್. ಕೃಷ್ಣಮೂರ್ತಿ ಅವರು ಈ ಕಾದಂಬರಿಯನ್ನು ಬರೆದಿದ್ದಾರೆ. ವಿಶೇಷ ಅಂದರೆ ಈಗ ಈ ಕಾದಂಬರಿಗೆ ತಾವೇ ಸಿನಿಮಾ ರೂಪಕ್ಕೆ ತರುತ್ತಿದ್ದು, ಅದನ್ನು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮೂವೀಸ್ ಲಾಂಛನದಲ್ಲಿ ತಾವೇ ನಿರ್ಮಿಸುತ್ತಿದ್ದಾರೆ.
‘ನೆನಪು ಮರುಕಳಿಸಿದಾಗ’ ಚಿತ್ರದಲ್ಲಿ ಬುಲೆಟ್ ವಿನೋದ್ ನಾಯಕನಾಗಿದ್ದು, ಅವರಿಗೆ ಸೋನಿ ಶೆಟ್ಟಿ ಹಾಗೂ ಸೌಂದರ್ಯ ನಾಯಕಿಯರಾಗಿದ್ದಾರೆ. ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಖನಾದ ಮೀಸೆ ಆಂಜನಪ್ಪ, ಚಿಕ್ಕ ಹೆಜ್ಜಾಜೆ ಮಹಾದೇವ್, ಮೈಸೂರು ಮಂಜುಳಾ, ನರಸಿಂಹಯ್ಯ, ಚಿತ್ರದುರ್ಗದ ಜಂಬುನಾಥ, ಗುಲ್ಬರ್ಗಾದ ಅಶೋಕ್ ಕಾಳೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೇವದಾಸ್ ಆಕ್ಷನ್ ಕಟ್ ಹೇಳುತ್ತಿದ್ದು, ಅಲೆನ್ ಕ್ಲಾರೆನ್ಸ್ ಕ್ರಾಸ್ತಾ ಸಂಗೀತ ನೀಡುತ್ತಿದ್ದಾರೆ. ಪವನ್ ಸಂಕಲನದ ಜವಾಬ್ದಾರಿ ಹೊತ್ತಿದ್ದು, ರಮೇಶ್ ಕೊಯಿರಾ ಛಾಯಾಗ್ರಹಣ, ಗಣೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ. ಡಿ. ಎಸ್. ಕೃಷ್ಣಮೂರ್ತಿಯವರಿಗೆ ನವನ್, ತ್ಯಾಗರಾಜ್, ಲೋಕೇಶ್, ಕಾಂತರಾಜು ಹಾಗೂ ಶ್ರೀನಿವಾಸ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.