

| ಹರ್ಷವರ್ಧನ್ ಬ್ಯಾಡನೂರು
ನಾನು ಪುನೀತ್ ಸರ್ ಜತೆ ಒಂದು ವರ್ಷ ಟ್ರಾವಲ್ ಮಾಡಿದೀನಿ. ಅವರ ಜತೆ ನನಗಾದ ಅನುಭವ ಪ್ರೇಕ್ಷಕರಿಗೂ ಆಗಬೇಕು ಅನ್ನೋದು ನನ್ನ ಉದ್ದೇಶ. ಅದನ್ನು ಹಾಗೆ ಪ್ರಸ್ತುತಪಡಿಸುವುದೂ ಅಷ್ಟೇ ಕಷ್ಟ. ಅಭಿಮಾನಿಗಳ ನಿರೀಕ್ಷೆ ತುಂಬಾ ಇದೆ. ಹೀಗಾಗಿ ಇದನ್ನು ಒಂದು ಚಲನಚಿತ್ರದಂತೆಯೇ ರಿಲೀಸ್ ಮಾಡಲಿದ್ದೇವೆ.
ಖಂಡಿತ ಅಲ್ಲ. ‘ಗಂಧದ ಗುಡಿ’ ಒಂದು ಫುಲ್ ಲೆಂಥ್ ಫೀಚರ್ ಫಿಲಂ. ಇದರಲ್ಲಿ ಹಾಡಿದೆ, ಸಾಹಿತ್ಯವಿದೆ, ಸಂಗೀತವಿದೆ. ವಿಭಿನ್ನ ಶೈಲಿಯ ಸಂಗೀತವನ್ನು ಪ್ರಯೋಗ ಮಾಡುತ್ತಿದ್ದೇವೆ. ಅಪ್ಪು ಅಂದರೆ ಫ್ಯಾಮಿಲಿ ಆಡಿಯನ್ಸ್ಗೆ ತುಂಬ ಇಷ್ಟ. ಎಲ್ಲರೂ ಮಕ್ಕಳ ಜೊತೆ ಥಿಯೇಟರ್ಗಳಿಗೆ ಹೋಗಿ ಸಿನಿಮಾ ವೀಕ್ಷಿಸಬಹುದು. ಸುಮಾರು 90 ನಿಮಿಷಗಳ ಕಾಲ ಈ ಚಿತ್ರ ಮೂಡಿಬರುವ ನಿರೀಕ್ಷೆಯಿದೆ.
ಅಕ್ಟೋಬರ್ ಕೊನೆಯ ವಾರ ಕನ್ನಡ ರಾಜ್ಯೋತ್ಸವದ ವಾರ. ಕಳೆದ ವರ್ಷ ಪುನೀತ್ ಸರ್ಅನ್ನು ಕಳೆದುಕೊಂಡ ಕಾರಣ ಎಲ್ಲೂ ರಾಜ್ಯೋತ್ಸವ ಆಚರಿಸಿರಲಿಲ್ಲ. ಹೀಗಾಗಿಯೇ ಈ ಬಾರಿ ಕನ್ನಡ ರಾಜ್ಯೋತ್ಸವದ ಜೊತೆಗೆ ಅಪು್ಪ ಅವರನ್ನೂ ಸೆಲೆಬ್ರೇಟ್ ಮಾಡಲಿದ್ದೇವೆ.
ಎಲ್ಲ ಋತುಗಳನ್ನೂ ಕಾಡುಗಳಲ್ಲಿ ಸೆರೆಹಿಡಿಯಬೇಕಿತ್ತು. ಹೀಗಾಗಿ ಪ್ರತಿ ತಿಂಗಳೂ ಇಬ್ಬರೂ ಸಮಯ ಮಾಡಿ ಕೊಂಡು ಕೆಲ ದಿನಗಳ ಕಾಲ ಅರಣ್ಯಗಳಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಅಷ್ಟು ದೊಡ್ಡ ಸ್ಟಾರ್ನ ದಟ್ಟ ಕಾಡುಗಳಿಗೆ ಕರೆದುಕೊಂಡು ಹೋಗಲು ನನಗೂ ಭಯವಾಗುತ್ತಿತ್ತು. ಆದರೆ ಅವರು ಮಗು ತರ ನಗುತ್ತಾ ಜತೆಗೆ ಬರುತ್ತಿದ್ದರು.
ನಾನು ಕರ್ನಾಟಕ ಮಾತ್ರವಲ್ಲ ವಿದೇಶಗಳಲ್ಲೂ ಕೆಲಸ ಮಾಡಿದ್ದೇನೆ. ಈ ಫಾರ್ವ್ಯಾಟ್ ನನಗೂ ಹೊಸದು. ಇದೊಂದು ಪ್ರಯೋಗ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ, ಇಡೀ ಭಾರತವೇ ತಿರುಗಿ ನೋಡುವಂತ ಕಂಟೆಂಟ್ ಬಂದಿದೆ. ‘ಗಂಧದ ಗುಡಿ’ ಇನ್ನೂ ಒಂದು ಹೆಜ್ಜೆ ಮುಂದೆ ಅಂತ ಹೇಳಬಲ್ಲೆ. ಅಪ್ಪು ಸರ್ ಅವರನ್ನು ನೆನಪಿಸಿಕೊಂಡರೆ ನನಗೆ ಖುಷಿಯಾಗುತ್ತದೆ. ಅದೇ ರೀತಿಯ ಖುಷಿ ಅವರ ಅಭಿಮಾನಿಗಳಿಗೂ ಆಗಬೇಕು. ಆ ರೀತಿ ಎಲ್ಲರೂ ಅಪ್ಪು ಸರ್ ಅವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಅಪ್ಪು ಸರ್ ಅನುಪಸ್ಥಿತಿಯಲ್ಲಿ ಅಶ್ವಿನಿ ಮೇಡಂ ಅವರೇ ಈಗ ನಮಗೆ ಬೆಂಬಲವಾಗಿ ನಿಂತಿದ್ದಾರೆ. ನಿಜ ಹೇಳಬೇಕು ಅಂದರೆ ಚಿತ್ರೀಕರಣದ ಸಮಯದಲ್ಲೇ ಪ್ರತಿ ಹಂತದಲ್ಲೂ ಅಶ್ವಿನಿ ಮೇಡಂ ಜತೆಗೆ ಬರುತ್ತಿದ್ದರು. ಅಪು್ಪ ಸರ್ ಇದ್ದಿದ್ದರೆ ಯಾವ ರೀತಿ ಈ ಚಿತ್ರ ಮೂಡಿಬರಬೇಕು ಅಂತ ನಿರೀಕ್ಷೆ ಮಾಡುತ್ತಿದ್ದರು? ಅವರಿಗೆ ಏನು ಇಷ್ಟವಾಗುತ್ತಿತ್ತು? ಅದೆಲ್ಲವನ್ನೂ ಈಗ ಅಶ್ವಿನಿ ಮೇಡಂ ಹೇಳುತ್ತಾರೆ. ನಮ್ಮ ಪ್ರತಿ ಹೆಜ್ಜೆಯಲ್ಲೂ ಅವರಿದ್ದಾರೆ.