ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ!; ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

KCR
Published on

ನವದೆಹಲಿ: ಇತ್ತೀಚೆಗೆ ದೇಶದ ವಿವಿಧೆಡೆ ಮೇಘಸ್ಫೋಟ ಸಂಭವಿಸಿ ಬಹಳಷ್ಟು ಸಾವು-ನೋವು ಸಂಭವಿಸಿದ್ದನ್ನು ಬಹುತೇಕ ಎಲ್ಲರೂ ನೋಡಿದ್ದಾರೆ, ಕೇಳಿದ್ದಾರೆ. ಇದು ಪ್ರಕೃತಿವಿಕೋಪ ಎಂದೇ ಹೇಳಲಾಗಿದ್ದರೂ, ಈ ಬಗ್ಗೆ ಈಗ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ದೇಶದಲ್ಲಿ ಸಂಭವಿಸಿರುವ ಮೇಘಸ್ಫೋಟಗಳ ಹಿಂದೆ ವಿದೇಶಿ ಕೈವಾಡ ಇರಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ತಮಗೆ ಬಂದಿರುವ ಕೆಲವು ಮಾಹಿತಿ ಪ್ರಕಾರ ದೇಶದಲ್ಲಿ ಸಂಭವಿಸಿರುವ ಮೇಘಸ್ಫೋಟಗಳ ಹಿಂದೆ ವಿದೇಶಿಯರ ಕೈವಾಡ ಇದೆ ಎಂದು ಅವರು ಹೇಳಿದ್ದಾರೆ.

ಮೇಘಸ್ಫೋಟಗಳ ಮೂಲಕ ಆಧುನಿಕ ರೀತಿಯಲ್ಲಿ ಪಿತೂರಿ ಮಾಡಲಾಗುತ್ತಿದೆ ಎಂದು ನನಗೆ ಮಾಹಿತಿ ಬಂದಿದೆ. ಮೊದಲು ಲೇಹ್​ನಲ್ಲಿ ಆಯ್ತು, ನಂತರ ಉತ್ತರಾಖಂಡದಲ್ಲಿ, ಬಳಿಕ ನಮ್ಮ ಗೋದಾವರಿ ನದಿಪಾತ್ರದಲ್ಲೂ ಮೇಘಸ್ಫೋಟ ಆಗಿದೆ. ಕೆಲವು ವಿದೇಶಗಳು ನಮ್ಮ ದೇಶದಲ್ಲಿ ಮೇಘಸ್ಫೋಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅದು ಎಷ್ಟರಮಟ್ಟಿಗೆ ಸತ್ಯ ಎಂದು ತಿಳಿದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net