ನಟಿಯರ ಬಳಿಕ ಇದೀಗ ಬಾಲಿವುಡ್​ನ ಹೀರೋಗಳಿಗೆ ಎನ್​ಸಿಬಿ ಸಮನ್ಸ್

Ncb
Published on

ಮುಂಬೈ: ಸುಶಾಂತ್​ ಸಿಂಗ್​ ಪ್ರಕರಣದ ಜತೆಗೆ ಬಾಲಿವುಡ್​ನಲ್ಲಿನ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಈಗಾಗಲೇ ಖ್ಯಾತ ನಾಮ ನಟಿಯರಿಗೆ ಎನ್​ಸಿಬಿ ವಿಚಾರಣೆ ಮಾಡಿತ್ತು. ಇದೀಗ ಅದು ಬಾಲಿವುಡ್​ನ ಸ್ಟಾರ್​ನಟರಿಗೆ ಎನ್​ಸಿಬಿ ಕಡೆಯಿಂದ ಶೀಘ್ರದಲ್ಲಿಯೇ ಬುಲಾವ್​ ಹೋಗುವ ಸಾಧ್ಯತೆ ಇದೆ.

ರಿಯಾ ಚಕ್ರವರ್ತಿ ವಿಚಾರಣೆಗೆ ಒಳಪಡುತ್ತಿದ್ದಂತೆ, ಬಾಲಿವುಡ್​ನ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​, ಸಾರಾ ಆಲಿಖಾನ್​ ಸೇರಿ ಹಲವು ನಟಿಯರನ್ನು ಎನ್​ಸಿಬಿ ವಿಚಾರಣೆ ನಡೆಸಿತ್ತು. ಈ ವಿಚಾರಣೆ ವೇಳೆ ಕೇವಲ ನಟಿಯರನ್ನಷ್ಟೇ ಗುರಿ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗಿತ್ತು. ಇದೀಗ ಅದಕ್ಕೆ ಎನ್​ಸಿಬಿಯ ಕೆಲ ಮೂಲಗಳಿಂದ ಉತ್ತರ ಸಿಕ್ಕಿದೆ.

ಹಲವು ಕಾರಣಗಳಿಂದ ನಟಿಯರ ಹೆಸರುಗಳೇ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ವಿಚಾರಣೆ ಮಾಡಬೇಕಾಯಿತು. ಏಕೆಂದರೆ, ಅವರೇ ಮೊದಲಿಗೆ ಬಲೆಗೆ ಬಿದ್ದಿದ್ದರಿಂದ. ಇದೀಗ ಮುಂದಿನ ಸರದಿ ಪುರುಷ ನಟರದ್ದು. ಶೀಘ್ರದಲ್ಲಿ ಒಂದಷ್ಟು ಸ್ಟಾರ್ ನಟರಿಗೆ ಸಮನ್ಸ್ ನೀಡಲಿದ್ದೇವೆ ಎಂದು ಎನ್​ಸಿಬಿ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಯಾರು ಆ ನಟ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಎ ಲಿಸ್ಟ್ ನಟನೇ ಆಗಿರಲಿದ್ದಾನೆ ಎಂಬ ಮಾತೂ ಸಹ ಕೇಳಿಬಂದಿದೆ. ದೇಶಭಕ್ತಿ ಸಿನಿಮಾ ಮೂಲಕವೇ ಸ್ಟಾರ್​ಪಟ್ಟ ಗಿಟ್ಟಿಸಿಕೊಂಡ ಯಂಗ್​ ನಟನಿಗೆ ವಿಚಾರಣೆಗೆ ಆಹ್ವಾನಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net