More

    ಇದ್ರಲ್ಲಿದೆ ಏನೋ ವಿಶೇಷ: ಮನರಂಜನಾ ಲೋಕಕ್ಕೆ ಸೇರ್ಪಡೆ ದಂಗಲ್ ಕನ್ನಡ

    ಬೆಂಗಳೂರು: ಕನ್ನಡ ಕಿರುತೆರೆಯ ವಾಹಿನಿಗಳಲ್ಲಿ ಹೊಸ ಕ್ರಾಂತಿ ಮಾಡುವುದಕ್ಕೆ ಬರುತ್ತಿದೆ ದಂಗಲ್ ಕನ್ನಡ ಎಂಬ ಹೊಸ ಮನರಂಜನಾ ಚಾನಲ್ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. 2006ರಲ್ಲಿ ಆರಂಭಗೊಂಡು, ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿ ಹಿಂದಿ, ಮರಾಠಿ, ಬಂಗಾಲಿ, ಭೋಜ್​ಪುರಿ ಭಾಷೆಗಳಲ್ಲಿ ಮನೆಮಾತಾಗಿರುವ ಎಂಟರ್​ಟೆನ್ ಗ್ರೂಪ್, ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ದಂಗಲ್ ಕನ್ನಡ ಮೂಲಕ ಪ್ರಸಾರ ಆರಂಭಿಸುತ್ತಿದೆ.

    ‘ಇದ್ರಲ್ಲಿದೆ ಏನೋ ವಿಶೇಷ …’ ಎಂಬ ಅಡಿಬರಹಕ್ಕೆ ಹೊಂದುವಂತೆ, ಈ ಚಾನಲ್​ನಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ‘ರಾಮಾಯಣ’, ‘ಸಾಯಿಬಾಬಾ’, ‘ಶನಿ ನಿನ್ನ ಮಹಿಮೆ’ಯಂತಹ ಪೌರಾಣಿಕ ಧಾರಾವಾಹಿಗಳ ಜತೆಗೆ ‘ನಾಗವಲ್ಲಿ’ಯಂತಹ ಫ್ಯಾಂಟಸಿ, ಸಮಾಜದಲ್ಲಿ ನಡೆಯುವ ಅಪರಾಧಗಳ ಮೇಲೆ ಬೆಳಕು ಚೆಲ್ಲವ ಕ್ರೈಂ ಅಲರ್ಟ್’, ಕುಬ್ಜ ಹೆಣ್ಣೊಬ್ಬಳ ಕುರಿತಾದ ‘ಬೆಳದಿಂಗಳ ಬಾಲೆ’ ಹಾಗೂ ಭರಪೂರ ಮನರಂಜನೆ ಕೊಡುವ ‘ತೆನಾಲಿ ರಾಮ’ ಮುಂತಾದ ಧಾರಾವಾಹಿಗಳು ವಾರದ ಏಳು ದಿನಗಳ ಕಾಲ ಪ್ರಸಾರವಾಗಲಿವೆ. ಇದಲ್ಲದೆ ಹಲವು ವಿಭಿನ್ನ ಚಿತ್ರಗಳು ಸಹ ಈ ಚಾನಲ್​ನಲ್ಲಿ ಪ್ರಸಾರವಾಗಲಿದೆ.

    ಇದನ್ನೂ ಓದಿ: ಮಸೀದಿಯಲ್ಲಿ ಅಡಗಿ ಜೈಲುಪಾಲಾಗಿದ್ದ 17 ವಿದೇಶಿ ತಬ್ಲಿಘಿಗಳು ಈಗ ಬಿಡುಗಡೆ!

    ದಂಗಲ್ ಕನ್ನಡ ಬಗ್ಗೆ ಮಾತನಾಡುವ ಎಂಟರ್​ಟೆನ್ ಗ್ರೂಪ್​ನ ಸಹಸಂಸ್ಥೆಯಾದ ಲೋಟಸ್ ಎಂಟರ್​ಪ್ರೖೆಸಸ್​ನ ಎಂಡಿ ಹಾಗೂ ಸಹಸಂಸ್ಥಾಪಕರಾದ ಶಿರಿಷ್ ಪಟ್ಟಣಶೆಟ್ಟಿ, ‘ದಕ್ಷಿಣ ಭಾರತದ ಮಾರುಕಟ್ಟೆಗೆ ಹೆಜ್ಜೆ ಇಡುವುದಕ್ಕೆ ಇದು ಸೂಕ್ತ ಸಮಯವಾಗಿದ್ದು, ಒಬ್ಬ ಗ್ರಾಹಕನಾಗಿ ನನ್ನ ಅನುಭವಗಳು, ನಮ್ಮ ಗೆಲುವಿನ ಸೂತ್ರಗಳನ್ನು ಬೆಳೆಸುವಲ್ಲಿ ಸಾಕಷ್ಟು ಸಹಾಯ ಮಾಡಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ಶರ್ಮಾ ಐಪಿಎಸ್ ನಮ್ ಮನೆಗೆ ಕಾಫಿ ಕುಡಿಯೋಕೆ ಬಂದ್ರೆ ಈ ಅವಾಂತರ ನಿರೀಕ್ಷಿಸಿರಲಿಲ್ಲ : ಟಿವಿ ನಿರೂಪಕಿ

    ಎಂಟರ್​ಟೆನ್ ಟಿವಿ ನೆಟ್​ವರ್ಕ್​ನ ಅಧ್ಯಕ್ಷರಾಗಿರುವ ಮನೀಷ್ ಸಿಂಗಲ್ ಮಾತನಾಡಿದ್ದು, ‘ಮನರಂಜನಾ ಮಾಧ್ಯಮ ಕ್ಷೇತ್ರವು ಬಹಳಷ್ಟು ವಿಸ್ತಾರಗೊಂಡಿದ್ದು, ನಮ್ಮ ಸಂಸ್ಥೆಯು ಹಿಂದಿ ಹಾಗೂ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಗೆಲುವು ಸಾಬೀತುಪಡಿಸಿದೆ. ಇಲ್ಲಿಯೂ ಯಶಸ್ಸನ್ನು ಮುಂದುವರೆಸುವ ನಂಬಿಕೆ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ದೇಶದಲ್ಲಿ ಕೊನೆಗೂ ತಗ್ಗಿತು ಕರೊನಾ ವೈರಸ್‌ನ ವೇಗ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts