ರಿಯಾ ಚಕ್ರವರ್ತಿ ಕುರಿತು ಬಯೋಪಿಕ್?

Rhea Chakraborty 2
Published on

ಮುಂಬೈ: ಬಾಲಿವುಡ್​ನಲ್ಲಿ ಬಯೋಪಿಕ್​ಗಳ ಟ್ರೆಂಡ್ ಶುರುವಾಗಿದ್ದು, ಈಗಾಗಲೇ ಜನಪ್ರಿಯ ವ್ಯಕ್ತಿಗಳ ಕುರಿತು ಬಯೋಪಿಕ್ ನಿರ್ಮಾಣವಾಗಿವೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಆ ಚಿತ್ರ ಶುರುವಾಗುವ ಮುನ್ನವೇ, ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕುರಿತು ಬಯೋಪಿಕ್ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಸುಶಾಂತ್ ಸಿಂಗ್ ಅಸಹಜ ಸಾವು ಮತ್ತು ಡ್ರಗ್ಸ್ ಜಾಲದ ಕುರಿತು ಎನ್​ಸಿಬಿ ಅಧಿಕಾರಿಗಳು ರಿಯಾ ಅವರನ್ನು ಬಂಧಿಸಿದ್ದರು. ರಿಯಾ ಪ್ರಕರಣ ದಿನದಿಂದ ದಿನಕ್ಕೆ ರೋಚಕವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಕುರಿತು ಚಲನಚಿತ್ರ ಮತ್ತು ಕಿರುಚಿತ್ರಗಳನ್ನು ಮಾಡುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net