More

    ‘ಚಂದಮಾಮ’ದ ವಿಕ್ರಂ-ಬೇತಾಳ ಚಿತ್ರ ರಚಿಸುತ್ತಿದ್ದ ಕಲಾವಿದ ಶಿವಶಂಕರನ್ ಇನ್ನಿಲ್ಲ

    ಚೆನ್ನೈ: ‘ಚಂದಮಾಮ’ ನಿಯತಕಾಲಿಕದಲ್ಲಿ ವಿಕ್ರಂ-ಬೇತಾಳ ಮತ್ತಿತರ ಪ್ರಸಿದ್ಧ ಕತೆಗಳಿಗೆ ಚಿತ್ರ ರಚಿಸುತ್ತಿದ್ದ ಕೆ.ಸಿ. ಶಿವಶಂಕರನ್ (ಶಂಕರ್ ತಾತಯ್ಯ) ಇಂದು ಮಧ್ಯಾಹ್ನ ವಯೋಸಹಜ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ.

    ಅವರಿಗೆ 96 ವರ್ಷ ವಯಸ್ಸಾಗಿತ್ತು. ಕಳೆದ ಶತಮಾನದ ಅರವತ್ತರ ದಶಕದಿಂದ ಹಿಡಿದು ತೊಂಬತ್ತರ ದಶಕದವರೆಗೂ ‘ಚಂದಮಾಮ’ದಲ್ಲಿನ ಚಿತ್ರಗಳು ಮತ್ತು ಕತೆಗಳು ಎಲ್ಲ ವಯೋಮಾನದ ಜನರನ್ನು ಸೂಜಿಗಲ್ಲಿನಂತೆ ಸೆಳೆದು ಮೋಡಿ ಮಾಡಿದ್ದವು. ಮೂಲ ‘ಚಂದಮಾಮ’ ಸರಣಿಯ ಸದಸ್ಯರಲ್ಲಿ ಇವರೊಬ್ಬರೇ ಕೊನೆಯ ಕೊಂಡಿಯಾಗಿದ್ದರು.

    ಇದನ್ನೂ ಓದಿ: ಶರ್ಮಾ ಐಪಿಎಸ್ ನಮ್ ಮನೆಗೆ ಕಾಫಿ ಕುಡಿಯೋಕೆ ಬಂದ್ರೆ ಈ ಅವಾಂತರ ನಿರೀಕ್ಷಿಸಿರಲಿಲ್ಲ : ಟಿವಿ ನಿರೂಪಕಿ

    ಶಂಕರ್ ತಮಿಳುನಾಡಿನ ಈರೋಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದರು. ಅವರ ತಂದೆ ಶಾಲಾ ಮೇಷ್ಟ್ರಾಗಿದ್ದರು. ಶಂಕರ್‌ಗೆ ನಾಲ್ವರು ಸೋದರರು. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ಶಂಕರ್‌ಗೆ ತೀವ್ರ ಆಸಕ್ತಿ. ಇತಿಹಾಸದ ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ಉತ್ತರದ ಜತೆ ಐತಿಹಾಸಿಕ ವ್ಯಕ್ತಿಗಳ ಚಿತ್ರಗಳನ್ನೂ ಬರೆಯುತ್ತಿದ್ದರಂತೆ! ತಮ್ಮ ಸಹಪಾಠಿಗಳಿಗೂ ಚಿತ್ರಕಲೆ ಕಲಿಸುತ್ತಿದ್ದರು. 1941ರಲ್ಲಿ ಚೆನ್ನೈ ಸರ್ಕಾರಿ ಕಲಾ ಕಾಲೇಜು ಸೇರಿ ಪದವಿ ಪೂರ್ಣಗೊಳಿಸಿದರು. ನಂತರ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಳಿಕ ಪತ್ರಿಕೆ ಸೇರಿ ಅಲ್ಲಿಯೇ ನೆಲೆ ನಿಂತರು. ಚೆನ್ನೈನಲ್ಲಿ ಅವರು ಪತ್ನಿ ಗಿರಿಜಾ, ಪುತ್ರಿ ಹಾಗೂ ಇತರ ಕುಟುಂಬ ಸದಸ್ಯರ ಜತೆ ವಾಸಿಸುತ್ತಿದ್ದರು.

    ಜಾಮೀನಿಗೆ ಅರ್ಜಿ ಹಾಕುವುದಿಲ್ಲ, ನನ್ನನ್ನು ಗಲ್ಲಿಗೇರಿಸಿದರೂ ಸರಿ: ಉಮಾಭಾರತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts