ಸೌತ್​ ಬ್ಯೂಟಿ ನಯನತಾರಾಗೆ ಈ ರೀತಿ ಆಗಬಾರದಿತ್ತು... ಲೇಡಿ ಸೂಪರ್ ಸ್ಟಾರ್​ಗೆ ಸಾಲು ಸಾಲು ಆಘಾತ! Nayanthara

ಈ ವರ್ಷ ನಯನತಾರಾ ಅಭಿನಯದ 'ಮನ ಶಂಕರ್ ವರಪ್ರಸಾದ್ ಗಾರು' ಚಿತ್ರವನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಪ್ರಮುಖ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಭಾರಿ ನಿರೀಕ್ಷೆಗಳೊಂದಿಗೆ ತೆರೆಕಂಡ ಸುಂದರ್ ಸಿ ನಿರ್ದೇಶನದ 'ಮೂಕುತಿ ಅಮ್ಮನ್ 2' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಶೆ ಮೂಡಿಸಿದೆ.
Nayanthara
ಸೌತ್​ ಬ್ಯೂಟಿ ನಯನತಾರಾಗೆ ಈ ರೀತಿ ಆಗಬಾರದಿತ್ತು... ಲೇಡಿ ಸೂಪರ್ ಸ್ಟಾರ್​ಗೆ ಸಾಲು ಸಾಲು ಆಘಾತ!
Published on: 

ಚೆನ್ನೈ: ಭಾರತೀಯ ಸಿನಿಮಾ ರಂಗದಲ್ಲಿ 'ಲೇಡಿ ಸೂಪರ್ ಸ್ಟಾರ್' ಎಂದೇ ಖ್ಯಾತಿಯಾಗಿರುವ ನಟಿ ನಯನತಾರಾ ( Nayanthara ) ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸರಣಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ವಿಚಾರ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದು ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದರೂ, ಇತ್ತೀಚೆಗೆ ಅವರ ಅಭಿನಯದ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ವಿಫಲವಾಗುತ್ತಿವೆ.

ನಯನತಾರಾ ಅವರ ಸಿನಿಮಾ ಬಿಡುಗಡೆಯಾದರೆ ಸಾಕು ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದ್ದ ದಿನಗಳಿದ್ದವು, ಆದರೆ ಪ್ರಸ್ತುತ ಅವರ ಜನಪ್ರಿಯತೆ ಬಾಕ್ಸ್ ಆಫೀಸ್ ಗಳಿಕೆಯಾಗಿ ಪರಿವರ್ತನೆಯಾಗುತ್ತಿಲ್ಲ ಎಂಬ ಮಾತುಗಳು ಸಿನಿಮಾ ವಲಯದಲ್ಲಿ ಕೇಳಿಬರುತ್ತಿವೆ.

Also Read
ವರ್ಷಕ್ಕೆ ಒಮ್ಮೆ ಮಾತ್ರ ಬರುವ 11:11 ಮ್ಯಾನಿಫೆಸ್ಟೇಷನ್ ಪೋರ್ಟಲ್: ತಪ್ಪದೇ ನೀವಿದನ್ನು ಮಾಡಿದ್ರೆ ಬಯಸಿದ್ದೆಲ್ಲ ಸಿಗುತ್ತಂತೆ..! Manifestation Portal
Nayanthara

ಈ ವರ್ಷ ನಯನತಾರಾ ಅಭಿನಯದ 'ಮನ ಶಂಕರ್ ವರಪ್ರಸಾದ್ ಗಾರು' ಚಿತ್ರವನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಪ್ರಮುಖ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಮುಖ್ಯವಾಗಿ ಭಾರಿ ನಿರೀಕ್ಷೆಗಳೊಂದಿಗೆ ತೆರೆಕಂಡ ಸುಂದರ್ ಸಿ ನಿರ್ದೇಶನದ 'ಮೂಕುತಿ ಅಮ್ಮನ್ 2' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ನಿರಾಶೆ ಮೂಡಿಸಿದೆ.

ಮೊದಲ ಭಾಗ ಒಟಿಟಿಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದರೂ, ಸೀಕ್ವೆಲ್ ಥಿಯೇಟರ್‌ಗಳಲ್ಲಿ ಸದ್ದು ಮಾಡಲು ವಿಫಲವಾಯಿತು. ಇದರ ಜತೆಗೆ ಕವಿನ್ ಜತೆ ನಟಿಸಿದ 'ಹೈ' ಚಿತ್ರವಾಗಲಿ ಅಥವಾ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಪ್ರಮುಖ ಪಾತ್ರವಾಗಲಿ ನಯನತಾರಾ ಅವರಿಗೆ ಯಶಸ್ಸು ತಂದುಕೊಡಲಿಲ್ಲ, ಇದು ಅವರ ಮಾರ್ಕೆಟ್ ಮೇಲೆ ತೀವ್ರ ಪರಿಣಾಮ ಬೀರಿದೆ.

ಈ ಸರಣಿ ಸೋಲುಗಳ ನಡುವೆಯೂ ನಯನತಾರಾ ಕೈಯಲ್ಲಿ ಕೆಲ ಪ್ರಮುಖ ಹಾಗೂ ನಿರೀಕ್ಷಿತ ಸಿನಿಮಾಗಳಿದ್ದು, ಅಭಿಮಾನಿಗಳು ಅವುಗಳ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಲಯಾಳಂ ನಟ ನಿವಿನ್ ಪೌಲಿ ಜತೆಗಿನ 'ಡಿಯರ್ ಸ್ಟೂಡೆಂಟ್ಸ್', ದುರೈ ಸೆಂಥಿಲ್ ಕುಮಾರ್ ನಿರ್ದೇಶನದ 'ನಯನತಾರಾ 81' ಹಾಗೂ ಭಾರಿ ಕುತೂಹಲ ಮೂಡಿಸಿರುವ ಪೀರಿಯಡ್ ಆಕ್ಷನ್ ಡ್ರಾಮಾ 'ರಕ್ಕಾಯಿ' ಚಿತ್ರಗಳು ನಯನತಾರಾ ಅವರ ಮುಂದಿನ ಹಾದಿಯನ್ನು ನಿರ್ಧರಿಸಲಿವೆ. ವಿಶೇಷವಾಗಿ 'ರಕ್ಕಾಯಿ' ಸಿನಿಮಾದಲ್ಲಿ ಅವರು ಸಂಪೂರ್ಣ ಹೊಸ ಮಾದರಿಯ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರಿ ಕಾತರವನ್ನು ಹುಟ್ಟುಹಾಕಿದೆ.

Also Read
ಧೂಳು ಫಿಲ್ಟರ್ ಮಾಡುತ್ತೆ, ಗಾಳಿಯನ್ನೂ ಬಿಸಿ ಮಾಡುತ್ತೆ ಇದು ‘ಸೈಗಾ ಆಂಟೆಲೋಪ್’ ಪ್ರಾಣಿಯ ಮ್ಯಾಜಿಕ್ ಮೂಗು! | Saiga Antelope
Nayanthara

ಇವುಗಳ ಜತೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗಿನ 'ಧರ್ಮನ್' ಪ್ರಾಜೆಕ್ಟ್ ಹಾಗೂ ಸಲ್ಮಾನ್ ಖಾನ್ - ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನ ಬೃಹತ್ ಬಾಲಿವುಡ್ ಸಿನಿಮಾ ನಯನತಾರಾ ಅವರ ವೃತ್ತಿಜೀವನಕ್ಕೆ ಅತ್ಯಂತ ನಿರ್ಣಾಯಕ ಎನಿಸಿವೆ. ಪ್ರಸ್ತುತ ನಯನತಾರಾ ಅವರಿಗೆ ಕೇವಲ ಒಂದು ಹಿಟ್ ಸಿನಿಮಾ ಮಾತ್ರವಲ್ಲ, ಚಿತ್ರರಂಗದಲ್ಲಿ ತಮ್ಮ 'ಲೇಡಿ ಸೂಪರ್ ಸ್ಟಾರ್' ಪಟ್ಟವನ್ನು ಮತ್ತೆ ಬಲವಾಗಿ ಸಾಬೀತುಪಡಿಸಲು ಬಾಕ್ಸ್ ಆಫೀಸ್‌ನಲ್ಲಿ ಬೃಹತ್ ಗೆಲುವಿನ ಅಗತ್ಯವಿದೆ, (ಏಜೆನ್ಸೀಸ್​).