ಜೀವನಾಂಶಕ್ಕಾಗಿ ನವಾಜುದ್ದೀನ್​ಗೆ ಪತ್ನಿ ಆಲಿಯಾ ಬೇಡಿಕೆ ಇಟ್ಟಿದ್ದು ಇಷ್ಟೊಂದು ಮೊತ್ತವಾ!?

maxresdefault
Published on

ಕರೊನಾ ನಡುವೆಯೂ ನವಾಜುದ್ದೀನ್​ ಸಿದ್ಧೀಕಿ ಮತ್ತು ಆಲಿಯಾ ಪಾಂಡೆ ವಿಚ್ಛೇದನದ ವಿಚಾರ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಎಲ್ಲವೂ ಕೊನೇ ಹಂತಕ್ಕೆ ಬಂದಿದ್ದು, ಜೀವನಾಂಶದ ವಿಚಾರ ಚರ್ಚೆಯಲ್ಲಿದೆ. ಪತಿ ನವಾಜುದ್ದೀನ್​ ಕಡೆಯಿಂದ ದೊಡ್ಡ ಮೊತ್ತವನ್ನೇ ಪಡೆದುಕೊಳ್ಳಲು ಆಲಿಯಾ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಕೆಲ ಮೂಲಗಳ ಪ್ರಕಾರ, ನವಾಜುದ್ದೀನ್​ ಕಡೆಯಿಂದ 30 ಕೋಟಿ ರೂಪಾಯಿ ಮತ್ತು ನಾಲ್ಕು ಕೋಣೆಗಳುಳ್ಳ ಪ್ಲಾಟ್​ಗೆ ಆಲಿಯಾ ಬೇಡಿಕೆ ಇಟ್ಟಿದ್ದಾರಂತೆ. ಅಷ್ಟೇ ಅಲ್ಲ ಇಬ್ಬರು ಮಕ್ಕಳನ್ನು ತಾವೇ ನೋಡಿಕೊಳ್ಳುವುದಾಗಿ ಹೇಳಿ, ಅವರಿಬ್ಬರ ಹೆಸರಲ್ಲಿ ತಲಾ 10 ಕೋಟಿ ಫಿಕ್ಸ್​ ಡಿಪಾಸಿಟ್​ ಮೊತ್ತವನ್ನೂ ಇಡಬೇಕಂತೆ. ಇಷ್ಟೆಲ್ಲ ಬೇಡಿಕೆಗಳನ್ನು ನವಾಜುದ್ದೀನ್​ಗೆ ವಕೀಲರ ಮುಖಾಂತರ ಕಳುಹಿಸಲಾಗಿದೆ.

ಇನ್ನು ಹೀಗೆ ಹರಿದಾಡಿದ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಲಿಯಾ, ‘ಇದು ವೈಯಕ್ತಿಕ ವಿಚಾರ. ಇದರಲ್ಲಿ ಯಾರೂ ತಲೆಹಾಕಬೇಡಿ. ಈ ರೀತಿಯ ನೋಟಿಸ್​ ನಮ್ಮಿಂದ ಹೋಗಿಲ್ಲ. ಇದೊಂದು ಕಲ್ಪಿತ ಸೂಚನೆ. ಈ ರೀತಿಯ ನೋಟಿಸನ್ನು ನವಾಜುದ್ದೀನ್​ ಕಡೆಯವರೇ ಹಂಚಿಕೆ ಮಾಡಿ, ಅವರನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಮಸಲತ್ತು’ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net