ಕಂಗನಾಗ್ಯಾಕೆ ಇನ್ನೂ ಸಮನ್ಸ್​ ಕೊಟ್ಟಿಲ್ಲ? ನಗ್ಮಾ ಪ್ರಶ್ನೆ

Kangana - Nagma
Published on

ಮುಂಬೈ: ಬಾಲಿವುಡ್​ ಕಲಾವಿದರಿಗೆ ಡ್ರಗ್ಸ್​ ನಂಟಿರುವ ಕುರಿತು ದೀಪಿಕಾ ಪಡುಕೋಣೆ ಸೇರಿದಂತೆ ನಾಲ್ವರು ಬಾಲಿವುಡ್​ ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ಸಮನ್ಸ್​ ನೀಡಿದ್ದು, ಶುಕ್ರವಾರ ಆ ನಟಿಯರು ಎನ್​ಸಿಬಿ ಅಧಿಕಾರಿಗಳ ಎದುರು ಹಾಜರಾಗಬೇಕಿದೆ.

ಈ ನಾಲ್ವರು ನಟಿಯರ ಜತೆಗೆ ಕಂಗನಾ ರಣಾವತ್​ಗೆ ಮಾತ್ರ ಯಾಕೆ ಇನ್ನೂ ಸಮನ್ಸ್​ ಕೊಟ್ಟಿಲ್ಲ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂಬ ಕಾರಣಕ್ಕೆ ನಾಲ್ವರು ನಟಿಯರಿಗೆ ಎನ್​ಸಿಬಿ ಸಮನ್ಸ್​ ಕೊಟ್ಟಿದೆ. ಕಂಗನಾ ಸಹ ತಾನು ಹಿಂದೊಮ್ಮೆ ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದರು. ಹಾಗಿರುವಾಗ, ಅವರಿಗೆ ಮಾತ್ರ ಯಾಕೆ ಇನ್ನೂ ಸಮನ್ಸ್​ ಕೊಟ್ಟಿಲ್ಲ' ಎಂದು ನಗ್ಮಾ ಪ್ರಶ್ನಿಸಿದ್ದಾರೆ.

ಎನ್​ಸಿಬಿಯವರು ಈ ವಿಷಯದಲ್ಲಿ ಬಹಳ ಸೆಲೆಕ್ಟಿವ್​ ಆಗಿದ್ದಾರೆ ಎಂದು ಆರೋಪಿಸಿರುವ ಕಂಗನಾ, 'ಬೇರೆಯವರು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಂಗನಾ, ಹಲವು ದಿನಗಳಿಂದ ಟ್ವೀಟ್​ ಮಾಡುತ್ತಲೇ ಇದ್ದಾರೆ. ಹಿಂದೊಮ್ಮೆ ತಾವು ಸಹ ಡ್ರಗ್ಸ್​​ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಆದರೆ, ಆಕೆಯನ್ನು ಮಾತ್ರ ಎನ್​ಸಿಬಿ ಅಧಿಕಾರಿಗಳು ಇದುವರೆಗೂ ಪ್ರಶ್ನೆ ಮಾಡಿಲ್ಲ. ಒಬ್ಬರು ಮಾಡಿದ್ದು ತಪ್ಪು ಎನ್ನುವುದಾದರೆ, ಎಲ್ಲರು ಮಾಡಿದ್ದೂ ತಪ್ಪೇ. ಹಾಗಾಗಿ ಕೆಲವರತ್ತ ಮಾತ್ರ ಎನ್​ಸಿಬಿಯವರು ಯಾಕೆ ಬೆರಳು ಮಾಡಿ ತೋರಿಸುತ್ತಿದ್ದಾರೆ' ಎಂಬುದು ನಗ್ಮಾ ಪ್ರಶ್ನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net