

ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೀತಾ ರಾಮಂ ಸಿನಿಮಾ ಯಶಸ್ಸಿನ ಬಳಿಕ ಮೃನಾಲ್ ಅವರ ಅದೃಷ್ಟವೇ ಬದಲಾಗಿದ್ದು, ನಾನಿ, ವಿಜಯ್ ದೇವರಕೊಂಡ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ.
ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಮೃನಾಲ್ ಮಿಂಚಿ ಹರಿಸಿದರೂ ನಿಜ ಜೀವನದಲ್ಲಿ ಮೃನಾಲ್ ಸಿಕ್ಕಾಪಟ್ಟೆ ಹಾಟ್ ಎಂಬುದು ಅವರ ಇನ್ಸ್ಟಾಗ್ರಾಂ ಪೇಜ್ ನೋಡಿದರೆ ಗೊತ್ತಾಗುತ್ತದೆ. ಸೀತಾ ಮಹಾಲಕ್ಷ್ಮೀಯನ್ನಾಗಿ ನೋಡಿದ ಅವರನ್ನು ಹಾಟ್ ಅವತಾರದಲ್ಲಿ ಕಂಡು ಅನೇಕರು ಹುಬ್ಬೇರಿಸಿದ್ದಾರೆ. ಅವರ ಹಾಟ್ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುವ ಮೃನಾಲ್ ಆಗಾಗ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.
ಇದೀಗ ಮೃನಾಲ್ ಅವರ ಹಳೆಯ ಫೋಟೋವೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಿಳಿ ಬಣ್ಣದ ದಿರಿಸಿನಲ್ಲಿ ಆ್ಯಪಲ್ ಫೋನ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡುತ್ತಿರುವ ದೃಶ್ಯವಿದೆ. ಚಿಕ್ಕ ವಯಸ್ಸಿನ ಫೋಟೋ ಆಗಿದೆ. ಸಪೂರ ದೇಹ ಮತ್ತು ಮೇಕಪ್ ಇಲ್ಲದ ಮುಖದೊಂದಿಗೆ ಕಿರುನಗೆ ಬೀರಿದ್ದಾರೆ. ಈ ಫೋಟೋ ನೋಡಿದವರು ಇವರೇನಾ ಸೀತಾ ಮಹಾಲಕ್ಷ್ಮೀ ಎಂದು ಹುಬ್ಬೇರಿಸುತ್ತಿದ್ದಾರೆ.
ಫಿಲ್ಮಿಫ್ರೈಡೇ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಫೋಟೋ ಜೊತೆಗೆ ಈಗಿನ ಗ್ಲಾಮರಸ್ ಫೋಟೋ ಸೇರಿಸಿ ಪೋಸ್ಟ್ ಮಾಡಲಾಗಿದೆ. ಫೋಟೋಗೆ 15 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ತರಹೇವಾರಿ ಕಾಮೆಂಟ್ಗಳು ಬಂದಿವೆ. (ಏಜೆನ್ಸೀಸ್)