ಬೀಚ್​ನಲ್ಲಿ ಮದುವೆಯಾಗಲಿರುವ KGF ಐಟಂ ಬೆಡಗಿ! ಎಲ್ಲಿ, ಯಾವಾಗ?

Published on
ಮದುವೆಯ ಸೀಸನ್ ನಡೆಯುತ್ತಿರುವುದರಿಂದ, ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಸೆಲೆಬ್ರಿಟಿಗಳು ವಿವಾಹವಾಗುತ್ತಿದ್ದಾರೆ. ಇದೀಗ, ನಟಿ ಮೌನಿ ರಾಯ್ ಕೂಡ ತಮ್ಮ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಲಿದ್ದಾರೆ. ಈ ಜೋಡಿ ಜನವರಿ 27 ರಂದು ಗೋವಾದಲ್ಲಿ ವಿವಾಹವಾಗಲಿದ್ದಾರಂತೆ. ವರದಿಗಳ ಪ್ರಕಾರ, ಈ ಜೋಡಿ ಗೋವಾದ ಒಂದು 5 ಸ್ಟಾರ್ ರೆಸಾರ್ಟ್ ಅನ್ನು ಮದುವೆ ಸ್ಥಳವಾಗಿ ಬುಕ್ ಮಾಡಿಕೊಂಡಿದ್ದಾರಂತೆ. ಈಗಾಗಲೇ ತಮ್ಮ ಮದುವೆಗೆ ಬಂಧುಗಳನ್ನು, ಸ್ನೇಹಿತರನ್ನು ಆಹ್ವಾನಿಸಲು ಪ್ರಾರಂಭಿಸಿದ್ದಾರೆ. ಅತಿಥಿಗಳಿಗೆ ತಮ್ಮ ಮದುವೆಯ ಕೆಲವು ವಿಚಾರಗಳನ್ನು ಮಾದ್ಯಮಗಳಿಗೆ ಹೇಳದಂತೆ ವಿನಂತಿಸಿದ್ದಾರೆ. ಇನ್ನು, ಮದುವೆಗೆ ಎಲ್ಲಾ ಅತಿಥಿಗಳು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತಂದರೇನೆ ಪ್ರವೇಶವಂತೆ. 
ಅಂದಹಾಗೆ, ವಗಟರ್ ಬೀಚ್ ಬಳಿಯ 'ಡಬ್ಲ್ಯು ಗೋವಾ ರೆಸಾರ್ಟ್'ನಲ್ಲಿ ಮದುವೆ ನಡೆಯಲಿದೆ. ಇದಲ್ಲದೆ, ಮದುವೆ ಸಮಾರಂಭವು ಮಧ್ಯಾಹ್ನ ನಡೆಯುತ್ತದೆ ಮತ್ತು ಇದೊಂದು ಕಡಲತೀರದ ವಿವಾಹವಾಗಿರುತ್ತದೆ. ಬಳಿಕ, ಅದ್ಧೂರಿ ವಿವಾಹದ ನಂತರ, ಈ ತಾರಾ ಜೋಡಿ ಜನವರಿ 28 ರಂದು ಪಾರ್ಟಿ ಮಾಡಲು ಯೋಜಿಸುತ್ತಿದ್ದಾರೆ. ನಟಿ ಮೌನಿ ರಾಯ್ ಅವರ ನಿಕಟ ಸ್ನೇಹಿತರು ಮತ್ತು ಡ್ಯಾನ್ಸ್ ರಿಯಾಲಿಟಿ ಶೋ ಹಳೆಯ ವಿದ್ಯಾರ್ಥಿಗಳಾದ ಪ್ರತೀಕ್ ಉಟೇಕರ್ ಮತ್ತು ರಾಹುಲ್ ಶೆಟ್ಟಿ ಅವರೊಂದಿಗೆ ಮದುವೆ ಡ್ಯಾನ್ಸ್​ಗೆ ರಿಹರ್ಸಲ್ ಮಾಡುತ್ತಿದ್ದಾರಂತೆ.
ನಟಿಯ ಮದುವೆಯ ಆಹ್ವಾನಿತರಲ್ಲಿ, ಬಾಲಿವುಡ್ ನಿರ್ಮಾಪಕರಾದ ಕರಣ್ ಜೋಹರ್, ಏಕ್ತಾ ಕಪೂರ್, ಡಿಸೈನರ್ ಮನೀಶ್ ಮಲ್ಹೋತ್ರಾ, ಮಾಜಿ ನಟಿ ಆಶಿಕಾ ಗೊರಾಡಿಯಾ ಅವರು ಮೊದಲಿಗರಾಗಿದ್ದಾರೆ. ಇತ್ತೀಚೆಗೆ, ಮೌನಿ ರಾಯ್ ಗೋವಾದಲ್ಲಿ ತಮ್ಮ ಬ್ಯಾಚಿಲ್ಲೋರೆಟ್ ಪಾರ್ಟಿಯನ್ನು ಎಂಜಾಯ್ ಮಾಡಿದ್ದು, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net