ಮೋಕ್ಷಿತಾ ಹೊಸ ದುನಿಯಾ - ಕಿರುತೆರೆಯಿಂದ ಹಿರಿತೆರೆಗೆ ಬಂದ ಪಾರು

Mokshitha Pai (5)
Published on

ಬೆಂಗಳೂರು : ಕಿರುತೆರೆಯಲ್ಲಿ ಇತ್ತೀಚೆಗೆ ದೊಡ್ಡ ಹೆಸರು ಮಾಡಿದವರೆಂದರೆ, ‘ಜೊತೆಜೊತೆಯಲಿ’ ಖ್ಯಾತಿಯ ಮೇಘ ಶೆಟ್ಟಿ ಮತ್ತು ‘ಪಾರು’ ಧಾರಾವಾಹಿಯ ಮೋಕ್ಷಿತಾ ಪೈ. ಈಗಾಗಲೇ ಮೇಘ ಶೆಟ್ಟಿ, ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ಅವರ ಹಾದಿಯಲ್ಲೇ ಮೋಕ್ಷಿತಾ ಪೈ ಸಹ ನಡೆದಿದ್ದು, ‘ದುನಿಯಾ’ ವಿಜಯ್ ನಿರ್ದೇಶನದ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಸಲಗ’ ನಂತರ ಹೊಸಬರನ್ನಿಟ್ಟುಕೊಂಡು ಚಿತ್ರ ಮಾಡುವುದಾಗಿ ವಿಜಯ್ ಕೆಲವು ದಿನಗಳ ಹಿಂದಷ್ಟೇ ಘೋಷಿಸಿದ್ದರು. ಈ ಚಿತ್ರಕ್ಕೆ ಡಾ. ರಾಜಕುಮಾರ್ ಕುಟುಂಬದ ಲಕ್ಕಿ ಗೋಪಾಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇನ್ನು ಚಿತ್ರದ ನಾಯಕಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಅದಕ್ಕೆ ಉತ್ತರವಾಗಿ ಮೋಕ್ಷಿತಾ ಪೈ ಸಿಕ್ಕಿದ್ದಾರೆ.

ಲಕ್ಕಿ ಹಾಗೂ ಮೋಕ್ಷಿತಾ ನಾಯಕ-ನಾಯಕಿಯಾಗಿ ಫಿಕ್ಸ್ ಆಗಿದ್ದು, ಮಿಕ್ಕಂತೆ ಇತರೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದುನಿಯಾ ವಿಜಯ್ ಹೊತ್ತರೆ, ಸಂಭಾಷಣೆಯನ್ನು ಮಾಸ್ತಿ ಬರೆಯುತ್ತಿದ್ದಾರೆ. ಸಂಗೀತದ ಜವಾಬ್ದಾರಿ ವಾಸುಕಿ ವೈಭವ್ ಮತ್ತು ಚರಣ್ ರಾಜ್ ಅವರದ್ದು. ಬಾಲು ಶಿವಮೊಗ್ಗ ಛಾಯಾಗ್ರಹಣ ನಿಭಾಯಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶೀರ್ಷಿಕೆಯನ್ನು ಅನಾವರಣ ಮಾಡಲಿದ್ದಾರೆ ದುನಿಯಾ ವಿಜಯ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net