More

    ದಾಖಲೆ ಪತ್ರಗಳಿಲ್ಲದೆ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಇಟ್ಟುಕೊಂಡಿದ್ದ ಜುವೆಲ್ಲರಿ ಮಳಿಗೆ!

    ಚೆನ್ನೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಂದೇ ಚಿನ್ನದ ಮಳಿಗೆಗೆ ಸೇರಿದ ವಿವಿಧ ಶಾಖೆಗಳ ಮೇಲೆ ದಾಳಿ ನಡೆಸಿದ್ದು, ಒಟ್ಟು 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ದಾಸ್ತಾನು ಇಟ್ಟುಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಗುರುವಾರ ತಿಳಿಸಿದೆ.

    ಚೆನ್ನೈ, ಮುಂಬೈ, ಕೋಲ್ಕತ, ಕೊಯಮತ್ತೂರು, ಸೇಲಂ, ತಿರುಚ್ಚಿ, ಮಧುರೈ, ತಿರುನೆಲ್ವೇಲಿಗಳಲ್ಲಿ ಚಿನ್ನದ ಮಳಿಗೆಯ ಶಾಖೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಘೋಷಿತ ಆದಾಯ ಪತ್ತೆಯಾಗಿದೆ. ಚಿನ್ನದ ಮಳಿಗೆಯವರು ಸ್ವಘೋಷಣೆಯ ಸಂದರ್ಭದಲ್ಲಿ 150- ಕೋಟಿ ರೂಪಾಯಿ ಆದಾಯ ಬಹಿರಂಗಪಡಿಸಿದ್ದರು.

    ಇದನ್ನೂ ಓದಿ: ಮೈಸೂರಿನಲ್ಲಿರುವುದೆಲ್ಲ ಹಸಿರು ಪಟಾಕಿ: ನಿಶ್ಚಿತೆಯಿಂದ ಖರೀದಿಸಲು ವರ್ತಕರ ಮನವಿ

    ಈ ಡೀಲರ್ ಗ್ರೂಪ್​ನವರು ವ್ಯಾಪಾರೇತರವಾಗಿ ಮಾಡಿರುವ ಹೂಡಿಕೆ, ಲಾಭ ಕಡಿಮೆ ತೋರಿಸುವುದಕ್ಕೆ ಮಾಡಿರುವ ಹೊಂದಾಣಿಕೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಮಳಿಗೆಗಳಲ್ಲಿ ಒಟ್ಟು 814 ಕಿಲೋ ಚಿನ್ನ ಪತ್ತೆಯಾಗಿತ್ತು. ಇದರ ಮೌಲ್ಯ 400 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಈ ಚಿನ್ನವನ್ನು ಅಂದಾಜು ಲೆಕ್ಕಪತ್ರಗಳನ್ನು ಆಧರಿಸಿ ಸಾಗಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. (ಏಜೆನ್ಸೀಸ್)

    ರಸಗೊಬ್ಬರಕ್ಕೆ ಸಹಾಯಧನ ನೀಡುವುದಕ್ಕಾಗಿ 65,000 ಕೋಟಿ ರೂಪಾಯಿ ಘೋಷಿಸಿದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts