ನಿಮ್ಮಬ್ಬರಿಗೂ ಕನಿಷ್ಠ ಜ್ಞಾನವೂ ಇಲ್ವಾ? ವಿಜಯ್​-ರಶ್ಮಿಕಾ ವಿರುದ್ಧ ಮೋಹನ್‌ ಲಾಲ್ ಅಭಿಮಾನಿಗಳ ಆಕ್ರೋಶ..! Mohanlal Fans

ಇತ್ತೀಚೆಗೆ ನಡೆದ ಕರಣ್ ಜೋಹರ್ ನಿರೂಪಣೆಯ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' (Koffee with Karan) ಕಾರ್ಯಕ್ರಮದಲ್ಲಿ ವಿಜಯ್​ ಮತ್ತು ರಶ್ಮಿಕಾ ಭಾಗವಹಿಸಿದ್ದರು.
Mohanlal Fans
ವಿಜಯ್​-ರಶ್ಮಿಕಾ ವಿರುದ್ಧ ಮೋಹನ್‌ ಲಾಲ್ ಅಭಿಮಾನಿಗಳ ಆಕ್ರೋಶ
Published on: 

ಮುಂಬೈ: ಸೆಲೆಬ್ರಿಟಿಗಳ ಸಣ್ಣಪುಟ್ಟ ಮಾತುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದವಾಗಿ ಬದಲಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಜನಪ್ರಿಯ ಚಾಟ್ ಶೋ ಒಂದರಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್ ಅವರ ಅಧಿಕೃತ ಬಿರುದಿನ ಬಗ್ಗೆ ಸ್ಟಾರ್​ ತಾರಾ ದಂಪತಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನೀಡಿದ ಪ್ರತಿಕ್ರಿಯೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಮೋಹನ್‌ಲಾಲ್ ಅಭಿಮಾನಿಗಳು ( Mohanlal Fans ) ಇಬ್ಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇತ್ತೀಚೆಗೆ ನಡೆದ ಕರಣ್ ಜೋಹರ್ ನಿರೂಪಣೆಯ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' (Koffee with Karan) ಕಾರ್ಯಕ್ರಮದಲ್ಲಿ ವಿಜಯ್​ ಮತ್ತು ರಶ್ಮಿಕಾ ಭಾಗವಹಿಸಿದ್ದರು. ಈ ವೇಳೆ ದಕ್ಷಿಣ ಭಾರತದ ನಟರ ಬಿರುದುಗಳ ಕುರಿತು ಕ್ವಿಜ್ ಏರ್ಪಡಿಸಲಾಗಿತ್ತು. ಅಲ್ಲು ಅರ್ಜುನ್ ಅವರ ಬಿರುದು 'ಐಕಾನ್ ಸ್ಟಾರ್' ಹಾಗೂ ಯಶ್ ಅವರ ಬಿರುದು 'ರಾಕಿಂಗ್ ಸ್ಟಾರ್' ಎಂದು ರಶ್ಮಿಕಾ ಮಂದಣ್ಣ ತಕ್ಷಣವೇ ಸರಿಯಾಗಿ ಉತ್ತರಿಸಿದರು. ಆದರೆ, ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಕರಣ್ ಜೋಹರ್, ಭಾರತೀಯ ಚಿತ್ರರಂಗದ ದಿಗ್ಗಜ ನಟ ಮೋಹನ್‌ ಲಾಲ್ ಅವರ ಪ್ರಸಿದ್ಧ ಬಿರುದಾದ 'ದಿ ಕಂಪ್ಲೀಟ್ ಆಕ್ಟರ್' ಯಾರದ್ದು ಎಂದು ಪ್ರಶ್ನಿಸಿದರು.

Also Read
ಲಂಡನ್​ನಲ್ಲಿ ರಾಜಾ ಸಾಬ್​ ಬ್ಯೂಟಿ ರಿಧಿ ಕುಮಾರ್:​ ಗ್ಲಾಮರಸ್​ ಫೋಟೋಗಳು​ ವೈರಲ್​..! Riddhi Kumar
Mohanlal Fans

ಈ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ವಿಜಯ್ ದೇವರಕೊಂಡ, ಅದು "ನನ್ನದು!" ಎಂದು ಹೇಳಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಕರಣ್ ಜೋಹರ್, ಆ ಬಿರುದು ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್ ಅವರಿಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದರು. ಕರಣ್ ಮಾತು ಕೇಳುತ್ತಿದ್ದಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಅಚ್ಚರಿಗೊಂಡು, "ಮೋಹನ್‌ಲಾಲ್ ಸರ್?" ಎಂದು ಮರುಪ್ರಶ್ನೆ ಹಾಕಿದರು. ಭಾರತೀಯ ಚಿತ್ರರಂಗದಲ್ಲಿ ದಶಕಗಳ ಅನುಭವವಿರುವ ಹಿರಿಯ ನಟನ ಹೆಗ್ಗಳಿಕೆಯ ಬಿರುದಿನ ಬಗ್ಗೆ ಇಬ್ಬರೂ ಸ್ಟಾರ್ ನಟರಿಗೆ ಸಾಮಾನ್ಯ ಜ್ಞಾನ ಇಲ್ಲದಿರುವುದನ್ನು ಕಂಡು ಮೋಹನ್‌ ಲಾಲ್ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಕಮೆಂಟ್ ಬಾಕ್ಸ್‌ಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರನ್ನು ಮೋಹನ್​ ಲಾಲ್​ ಅಭಿಮಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯ ನಟರ ಬಗ್ಗೆ ಹಾಗೂ ಅವರ ಸಾಧನೆಗಳ ಬಗ್ಗೆ ಕನಿಷ್ಠ ಗೌರವ ಅಥವಾ ಅರಿವಿಲ್ಲದೆ ಹಗುರವಾಗಿ ಮಾತನಾಡಿರುವುದನ್ನು ಅಭಿಮಾನಿಗಳು ಸಹಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿರುದ್ಧ ನಿರಂತರವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

Also Read
ರಶ್ಮಿಕಾ ಮಂದಣ್ಣ 100 ಬಾರಿ ಮದುವೆಗೆ ಪ್ರಸ್ತಾಪ ಮಾಡಿದರೂ ಲೇಟಾಗಿ ಓಕೆ ಅಂದಿದ್ಯಾಕೆ?; ವಿಜಯ್ ದೇವರಕೊಂಡ ಸ್ಪಷ್ಟನೆ..Vijay-Rashmika
Mohanlal Fans

ಅಂದಹಾಗೆ, ಮೋಹನ್‌ ಲಾಲ್ ಅಭಿಮಾನಿಗಳು ಈ ರೀತಿ ಆಕ್ರೋಶ ಹೊರಹಾಕಿರುವುದು ಹೊಸದೇನಲ್ಲ. ಇತ್ತೀಚೆಗೆ ರಜನಿಕಾಂತ್ ಅಭಿನಯದ 'ಜೈಲರ್ 2' (Jailer 2) ಸಿನಿಮಾದಲ್ಲಿ ಮೋಹನ್‌ ಲಾಲ್ ಅವರ ಸ್ಕ್ರೀನ್ ಟೈಮ್ ಕಡಿಮೆ ಮಾಡಲಾಗಿದೆ ಎಂಬ ಕಾರಣಕ್ಕೆ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಸಾಮಾಜಿಕ ಜಾಲತಾಣದ ಕಮೆಂಟ್ ಬಾಕ್ಸ್ ಮೇಲೂ ಅಟ್ಯಾಕ್ ಮಾಡಿದ್ದರು. ಈಗ ಅದೇ ರೀತಿಯ ಆಕ್ರೋಶದ ಅಲೆ ಮತ್ತೊಮ್ಮೆ ಮುಂದುವರಿದಿದ್ದು, ಇದೀಗ ಮೋಹನ್‌ ಲಾಲ್ ಅಭಿಮಾನಿಗಳ ಕೆಂಗಣ್ಣಿಗೆ ವಿಜಯ್ ಮತ್ತು ರಶ್ಮಿಕಾ ಗುರಿಯಾಗಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net