

100 ಬಾರಿ ಮದುವೆಯಾಗುವಂತೆ ಪ್ರಸ್ತಾಪಿಸಿದ್ದ ರಶ್ಮಿಕಾ ಇದರ ಹಿಂದಿನ ಕಾರಣವೇನು ಎನ್ನುವ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ವಿಜಯ್ ದೇವರಕೊಂಡ .
ಪ್ರೀತಿ, ಮದುವೆ, ಸಂಬಂಧಗಳ ವಿಚಾರದಲ್ಲಿ ನನ್ನನ್ನೇ ನಾನು ಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದೆ.
ಪ್ರೀತಿ ಮೇಲಿನ ಅಪನಂಬಿಕೆಯೇ ನಾನು ಮದುವೆ ಪ್ರಸ್ತಾಪಕ್ಕೆ ಉತ್ತರಿಸಲು ಸಾಧ್ಯವಾಗದ್ದಕ್ಕೆ ಕಾರಣ ಎಂದ ವಿಜಯ್ ದೇವರಕೊಂಡ.
Vijay -Rashmika : ಗೀತಗೋವಿಂದಂ ಸಿನಿಮಾ ನಂತರ, ರಶ್ಮಿಕಾ-ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಬ್ಬರನೊಬ್ಬರು ಪ್ರೇಮಿಸಿಕೊಳ್ಳುತ್ತಿದ್ದಾರೆ ಎಂದೇ ನಂಬಲಾಗಿತ್ತು. ಜೊತೆಗೆ ಇಬ್ಬರು ಒಟ್ಟಾಗಿ ಸುತ್ತಾಡುವ ಫೋಟೋಗಳು ಡೇಟಿಂಗ್ನಲ್ಲಿದ್ದಾರೆ ಎನ್ನುವುದನ್ನು ಹೇಳುತ್ತಿತ್ತು,. ಆದರೆ, ಕರಣ್ ಜೋಹರ್ ಅವರ ಟಾಕ್ ಶೋ ನಲ್ಲಿ ರಶ್ಮಿಕಾ ಅವರೇ ಮದುವೆಗೆ ಮೊದಲು ಪ್ರಸ್ತಾಪಿಸಿದ್ದು ಎನ್ನುವ ವಿಚಾರ ರಿವೀಲ್ ಆಗಿರುವುದು, ತಾರಾ ದಂಪತಿಯ ಫ್ಯಾನ್ಸ್ಗೆ ಅಚ್ಚರಿ ವಿಚಾರವಾಗಿ ಪರಿಣಮಿಸಿದೆ.
ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ರಶ್ಮಿಕಾ 100 ಬಾರಿ ಮದುವೆಯಾಗೋಣ ಎಂದಿದ್ದರು ಎಂದು ಹೆಮ್ಮೆಯಿಂದ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಇದಕ್ಕೆ ರಶ್ಮಿಕಾ ಕೂಡಾ ನಗುತ್ತಾ ಹೌದು, 100 ಬಾರಿ ಅಲ್ಲ ವರ್ಷ ಪೂರ್ತಿ ಕೇಳಿದ್ದೇನೆ ಎಂದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ನೆಟ್ಟಿಗರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ವಿಜಯ್ ಆ ಮಾತನ್ನು ಹೇಳಬಾರದಿತ್ತು. ವಿಜಯ್ಗೆ ರಶ್ಮಿಕಾ ಮೇಲೆ ಪ್ರೀತಿಯೇ ಇಲ್ಲ ಎನ್ನುವ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ವಿಜಯ್ ದೇವರಕೊಂಡ ಅವರಿಗೆ ಅಷ್ಟೊಂದು ಬಾರಿ ಮದುವೆಯಾಗು ಎಂದು ರಶ್ಮಿಕಾ ಕೇಳಿಕೊಂಡ ಹಿಂದಿನ ಕಾರಣವೇನು?, ರಶ್ಮಿಕಾ ಮೇಲೆ ನಿಜಕ್ಕೂ ಅವರಿಗೆ ಯಾವುದೇ ಪ್ರೀತಿ ಇರಲಿಲ್ವಾ ಎನ್ನುವ ಎನ್ನುವುದರ ಹೊಸ ವಿಡಿಯೋ ತುಣುಕು ಹಾಗೂ ಕಾಮೆಂಟ್ಗಳು ಎಕ್ಸ್ನಲ್ಲಿ ಚರ್ಚೆಯಾಗುತ್ತಿವೆ.
ನನಗೆ ಪ್ರೀತಿ, ಮದುವೆ ಮೇಲೆ ಇದ್ದ ಅಪನಂಬಿಕೆಯೇ ಆಕೆ ಅಷ್ಟೊಂದು ಬಾರಿ ಮದುವೆ ಬಗ್ಗೆ ಪ್ರಸ್ತಾಪಿಸಲು ಕಾರಣ. ನಾನು ಎಷ್ಟೊಂದು ಸಂದರ್ಶನದಲ್ಲಿ ಪ್ರೀತಿಯ ಬಗ್ಗೆ ತಾತ್ಸಾರ ಹಾಗೂ ಅವಿಶ್ವಾಸದಿಂದ ಮಾತನಾಡಿದ್ದೆ. ಪ್ರೀತಿ, ಮದುವೆ ಎನ್ನುವ ಪ್ರಕ್ರಿಯೆಯಲ್ಲಿ ನನಗೆ ನಂಬಿಕೆ ಇರಲಿಲ್ಲ. ವೃತ್ತಿಜೀವನ ಹಾಗೂ ಹಣವೇ ಮುಖ್ಯವೆಂದು ಭಾವಿಸಿದ್ದೆ. ಪ್ರೀತಿಯು ನನ್ನ ಗುರಿಯಿಂದ ನನ್ನನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದೆನಿಸುತ್ತಿತ್ತು. ನಾನು ಅದಕ್ಕೆ ಕಡಿವಾಣ ಹಾಕಬೇಕಿತ್ತು. ಹೀಗಾಗಿ ಹಠಾತ್ತನೇ ಯಾವುದೇ ವಿಚಾರಕ್ಕೂ ಉತ್ತರಿಸಿಲ್ಲ ಎಂದಿದ್ದಾರೆ,
ಮುಂದುವರೆದು, ಕಾಲ ಕಳೆದಂತೆ ರಶ್ಮಿಕಾ ನನ್ನೊಂದಿಗೆ ಇರುವುದು ನನಗೆ ಫೀಲ್ ಗುಡ್ ಎನಿಸುತ್ತಿತ್ತು. ಆಕೆಯ ಅಗತ್ಯ ನನಗಿದೆ ಎನಿಸಲು ಶುರುವಾಯಿತು. ರಶ್ಮಿಕಾ ಜೊತೆಗಿನ ಒಡನಾಟದಿಂದ ಜೀವನ ಉತ್ತಮವಾಯಿತು, ಊಟ ಮತ್ತು ನಿದ್ರೆ ಚೆನ್ನಾಗಿ ಬರಲು ಆರಂಭವಾಯಿತು. ಆಗಲೇ ಈಕೆಯೊಂದಿಗೆ ಮದುವೆಯಾಗಬೇಕೆಂದು ನಿರ್ಧರಿಸಿದೆ ಎಂದು ಸ್ಪಷ್ಟನೆ ಕೊಟ್ಟರು.
100 ಬಾರಿ ಕೇಳಲ್ಪಟ್ಟಿದ್ದಕ್ಕೆ ಸಂಬಂಧಿಸಿದ ತಮ್ಮ ಹೇಳಿಕೆಯನ್ನು ವಿವರಿಸುತ್ತಾ ವಿಜಯ್ ಹೇಳಿದರು, 'ಸಂಬಂಧವು ಉಳಿಯಲು ಸಾಧ್ಯವಿರುವ ಪ್ರತಿಯೊಂದು ಅಡ್ಡಿ-ಆತಂಕಗಳನ್ನು ಪರೀಕ್ಷಗೆ ಒಡ್ಡಿ ಫಲಿತಾಂಶ ಪಡೆದು ನಂತರ ಮುಂದುವರೆಯುವ ವ್ಯಕ್ತಿ ನಾನು. ಒಂದು ದಿನ ಆಕೆ(ರಶ್ಮಿಕಾ) 'ನೀನು ನನ್ನನ್ನು ಪರೀಕ್ಷೆ ಮಾಡುತ್ತಿದ್ದೀಯಾ' ಎಂದು ಕೇಳಿದ್ದಳು. ಆಗ ನನಗೆ ನಿಜಕ್ಕೂ ಅಪರಾಧಿ ಭಾವನೆಯಾಯಿತು. ನಾನು ನನ್ನನ್ನೇ ಪರೀಕ್ಷಿಸಿಕೊಳ್ಳುತ್ತಿದ್ದೆ. ಸಂಬಂಧವನ್ನು ಪರೀಕ್ಷಿಸುತ್ತಿದ್ದೆ. ರಶ್ಮಿಕಾ ನನ್ನನ್ನು ಮದುವೆಯಾಗು ಎಂದಾಗ ಇದು ಹಠಾತ್ ಭಾವನೆಯ ಪ್ರಚೋದನೆಯಾಗಿರಬಾರದು ಎಂದುಕೊಂಡೆ. ಹಾಗಾಗಿ ಮದುವೆಯಾಗೋಣ ಎಂದು ತಕ್ಷಣ ಹೇಳಿಲ್ಲ'.
ನನ್ನ ಭಾವನೆ ಏನೆಂದರೆ, ನಮ್ಮ ಬೇಸರದ ದಿನ, ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟುಕೊಂಡು ಮನೆಯಲ್ಲಿಯೇ ಕುಳಿತಾಗ ನಮ್ಮಿಬ್ಬರ ಈ ಪ್ರೀತಿ ಹಾಗೆಯೇ ಉಳಿಯುತ್ತದೆಯೇ ಎನ್ನುವುದನ್ನು ನಾನು ನೋಡಬೇಕಿತ್ತು. ನಮ್ಮ ಜೀವನದಲ್ಲಿ ಅಂತಹ ಎಲ್ಲ ದಿನಗಳೂ ಬರುತ್ತವೆ. ಇಷ್ಟೆಲ್ಲದರ ನಡುವೆಯೂ ಮದುವೆಯು ಅಷ್ಟು ಮುಖ್ಯವೆಂದು ಅನ್ನಿಸಿದರೆ, ಆಗ ನಾವು ಮದುವೆಯಾಗಬೇಕು ಎಂದುಕೊಂಡೆ ಹಾಗಾಗಿ ನಾನು ತಕ್ಷಣ ಆಕೆಯ ಬೇಡಿಕೆಗೆ ಉತ್ತರಿಸಿರಲಿಲ್ಲ ಎಂದು ವಿಜಯ್ ಸ್ಪಷ್ಟನೆ ಕೊಟ್ಟರು.
ಪ್ರೇಮಿಗಳು ಪ್ರಪೋಸ್ ಮಾಡಿಕೊಳ್ಳುವ ಕ್ಷಣವನ್ನು ರಶ್ಮಿಕಾ ಮಿಸ್ ಮಾಡಿಕೊಳ್ಳಬಾರದು ಎಂದು ನಾನು ಬಯಸಿದ್ದೆ. ಹೀಗಾಗಿ ಫೆಬ್ರವರಿಯಲ್ಲಿ ಅವರ ಮದುವೆಗೂ ಮುನ್ನ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ಪ್ರಪೋಸ್ ಮಾಡಲು ಬಯಸಿದ್ದೆ, ಆದರೆ ಸರಿಯಾದ ಉಂಗುರ ಸಿಗಲಿಲ್ಲ. ಹೀಗಾಗಿ ಮದುವೆ ಸಮಾರಂಭದ ಮೊದಲ ದಿನ ಅಂದರೆ ಸಂಗೀತ್ ರಾತ್ರಿ ಸ್ನೇಹಿತರ ಎದುರಲ್ಲೇ ಮಂಡಿಯೂರಿ ವಿಜಯ್ ರಶ್ಮಿಕಾಗೆ ಅಧಿಕೃತವಾಗಿ ಪ್ರಪೋಸ್ ಮಾಡಿದ್ದರು, (ಏಜೆನ್ಸೀಸ್).