ಲಂಡನ್​ನಲ್ಲಿ ರಾಜಾ ಸಾಬ್​ ಬ್ಯೂಟಿ ರಿಧಿ ಕುಮಾರ್:​ ಗ್ಲಾಮರಸ್​ ಫೋಟೋಗಳು​ ವೈರಲ್​..! Riddhi Kumar

ಚಿತ್ರರಂಗದ ಏಳು-ಬೀಳುಗಳ ನಡುವೆಯೂ ದಕ್ಷಿಣ ಭಾರತದ ಪ್ರತಿಭಾವಂತ ನಟಿ ರಿಧಿ ಕುಮಾರ್ ಅವರು ತಮ್ಮ ಲೇಟೆಸ್ಟ್ ಫೋಟೋಶೂಟ್​ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
Riddhi Kumar
ನಟಿ ರಿಧಿ ಕುಮಾರ್
Published on: 

ಲಂಡನ್ ಪ್ರವಾಸದಲ್ಲಿ ರಿಧಿ

ನಟಿ ರಿಧಿ ಕುಮಾರ್ ಸದ್ಯ ಲಂಡನ್‌ ಪ್ರವಾಸದಲ್ಲಿದ್ದು, ಅಲ್ಲಿ ವಿಭಿನ್ನ ವಾತಾವರಣವನ್ನು ಸವಿಯುತ್ತಿದ್ದಾರೆ. ತಮ್ಮ ಟ್ರಿಪ್‌ನ ಸುಂದರ ಕ್ಷಣಗಳನ್ನು ಸೆರೆಹಿಡಿದು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೆಚ್ಚಿನ ತಿನಿಸುಗಳು

ತಮ್ಮ ಲಂಡನ್ ಭೇಟಿಯ ವೇಳೆ ಭಾರತೀಯ, ಥಾಯ್ ಮತ್ತು ಫ್ರೆಂಚ್ ಭುಜಿನಿಯೆಗಳನ್ನು ಸವಿದಿರುವ ಅವರು, ವಿಶೇಷವಾಗಿ 'Tarte Tatin' ಖಾದ್ಯವು ತನ್ನ ಹೊಸ ಮೆಚ್ಚಿನ ಡಿಶ್ ಆಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಹುಣ್ಣಿಮೆ ಆಚರಣೆ

ಲಂಡನ್ ಪ್ರವಾಸದ ಒಂದು ದಿನದ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವ ರಿಧಿ, ಅಂದು ರಾತ್ರಿ ಪೂರ್ಣ ಚಂದ್ರನ ಬೆಳಕಿನಲ್ಲಿ ಆಕಾಂಕ್ಷೆಗಳ ಈಡೇರಿಕೆಗಾಗಿ (Manifestations) ಮತ್ತು ಹಾಲೋ ಶುದ್ಧೀಕರಣಕ್ಕಾಗಿ (Aura Cleansing) ವಿಶೇಷ ಆಚರಣೆಯಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.

ಬೋಲ್ಡ್ ಮತ್ತು ಟ್ರೆಂಡಿ ಲುಕ್

ಲಂಡನ್ ಪ್ರವಾಸದ ಸಂದರ್ಭದಲ್ಲಿ ಅವರು ಧರಿಸಿದ್ದ ಕಂದು ಬಣ್ಣದ ಹಾಲ್ಟರ್ ಕ್ರಾಪ್ ಟಾಪ್ ಹಾಗೂ ಲೋ-ರೈಸ್ ಗುಲಾಬಿ ಬಣ್ಣದ ಫ್ಲೋರಲ್ ರಫಲ್ ಸ್ಕರ್ಟ್ ಅವರ ಗ್ಲಾಮರಸ್ ಲುಕನ್ನು ಮತ್ತಷ್ಟು ಹೆಚ್ಚಿಸಿದೆ.

ಆಕರ್ಷಕ ಫ್ಯಾಷನ್ ಆಕ್ಸೆಸರೀಸ್

ಸ್ಟಡ್ಡ್ ಹೊಂದಿರುವ ಬ್ರೌನ್ ಬೆಲ್ಟ್, ಪಿಂಕ್ ಸ್ಟೋನ್ ನೆಕ್ಲೇಸ್, ತಲೆಯಲ್ಲಿ ಚಿಟ್ಟೆಯಾಕಾರದ ಹೇರ್ ಕ್ಲಿಪ್‌ಗಳು ಹಾಗೂ ಲೂಸ್ ವೇವ್ಸ್ ಹೇರ್ ಸ್ಟೈಲ್ ಅವರ ಬೋಲ್ಡ್ ಲುಕ್‌ಗೆ ಪರಿಪೂರ್ಣ ಮೆರುಗು ನೀಡಿತು.

ದಿ ರಾಜಾ ಸಾಬ್' ಸಿನಿಮಾ

ಈ ವರ್ಷ ಬಿಡುಗಡೆಯಾದ ಬಹು ನಿರೀಕ್ಷಿತ ಹಾಗೂ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಹಾರರ್-ಕಾಮಿಡಿ ಚಿತ್ರ 'ದಿ ರಾಜಾ ಸಾಬ್' ಸಿನಿಮಾದಲ್ಲಿ ರಿಧಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಬಾಕ್ಸ್ ಆಫೀಸ್ ಫಲಿತಾಂಶ

ಪ್ರಭಾಸ್ ಜೊತೆ ನಟಿಸಿದ್ದ 'ದಿ ರಾಜಾ ಸಾಬ್' ಚಿತ್ರವು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದರೂ ಸಹ, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ ವಿಫಲಗೊಂಡಿತು.

ವೈವಿಧ್ಯಮಯ ಸಿನಿಪಯಣ

'ದಿ ರಾಜಾ ಸಾಬ್' ಚಿತ್ರಕ್ಕೂ ಮುನ್ನ ಅವರು ಮರಾಠಿ ಭಾಷೆಯ 'ಕಧಿಪತ್ತಾ' ಹಾಗೂ 'ಸೂಪರ್‌ಬಾಯ್ಸ್ ಆಫ್ ಮಲೇಗಾಂವ್' ಮುಂತಾದ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net