ಇಡೀ ಚಿತ್ರರಂಗದ ಜತೆಗೆ 'ಬೇಬಿ ಶವರ್' ಆಚರಿಸಿಕೊಂಡ ನಟಿ ಅಮೂಲ್ಯ! ಫೋಟೋಗಳು ವೈರಲ್...

Published on
ಸ್ಯಾಂಡಲ್​ವುಡ್​ನ ಮುದ್ದು ಬೆಡಗಿ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು, ಕೆಲ ದಿನಗಳ ಹಿಂದೆ ತಮ್ಮ ಕುಟುಂಬದವರು ಅವರಿಗೆ ಸೀಮಂತ ಮಾಡಿದ್ದರು. ಬಳಿಕ, ನಟಿ ತಮ್ಮ ಒಂದಿಷ್ಟು ಆತ್ಮೀಯ ಸ್ನೇಹಿತರ ಜೊತೆಗೆ 'ಮಾಮ್ ಟು ಬಿ' ಪಾರ್ಟಿಯನ್ನು ಆಚರಿಸಿಕೊಂಡಿದ್ದಾರೆ. ಇದೀಗ, ಕನ್ನಡ ಚಿತ್ರರಂಗದವರು ನಟಿ ಅಮೂಲ್ಯಗೆ ಅದ್ಧೂರಿಯ 'ಬೇಬಿ ಶವರ್' ಮಾಡಿದ್ದಾರೆ. ಹೌದು, ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಅದ್ದೂರಿಯಾಗಿ ಪಾರ್ಟಿ ಏರ್ಪಡಿಸಲಾಗಿತ್ತು. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಈ 'ಬೇಬಿ ಶವರ್' ಫೋಟೋಗಳದ್ದೇ ಹವಾ. ನಟಿ ಅಮೂಲ್ಯ ಜೊತೆ ಕನ್ನಡ ಚಿತ್ರರಂಗದ ಮೇರು ನಟಿಮಣಿಯರು ಕ್ಲಿಕಿಸಿಕೊಂಡ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 'ಬೇಬಿ ಶವರ್' ಕಾರ್ಯಕ್ರಮದ ಫೋಟೋಗಳು ಕಂಡರೆ ಬಹುತೇಕ ಇಡೀ ಕನ್ನಡ ಚಿತ್ರರಂಗದವರು ಒಂದು ಕಡೆ ಸೇರಿದಂತೆ ಕಾಣುತ್ತಿತ್ತು.
ಕನ್ನಡ ಸಿನಿತಾರೆಯರನ್ನು ಒಂದು ಕಡೆ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿರುವುದು ನಿಜ. ಅದರಲ್ಲಿಯೂ, ನಟಿ ಅಮೂಲ್ಯ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೆತೆ ಕಾಣಿಸಿಕೊಂಡಿರುವ ಒಂದು ಫೋಟೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ನಟಿ ರಾಧಿಕಾ ಪಂಡಿತ್​, ನಟಿ ಶ್ರುತಿ, ನಟಿ ಸುಧಾರಾಣಿ, ನಟ ಉಪೇಂದ್ರ, ನಟಿ ಪ್ರಿಯಾಂಕಾ ಉಪೇಂದ್ರ, ನಟ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಹರಿಪ್ರಿಯಾ, ಹೀಗೆ ಹಲವಾರು ಸಿನಿ ತಾರೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾಯಿ ಆಗುತ್ತಿರುವ ನಟಿ ಅಮೂಲ್ಯ ಅವರಿಗೆ ಎಲ್ಲರೂ ಶುಭ ಹಾರೈಸಿ, ಕೆಲವರು ಉಡುಗೊರೆಗಳನ್ನು ನೀಡಿದ್ದಾರೆ. ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್ ಅವರ ಜತೆ ನಟಿ ಅಮೂಲ್ಯ 2017ರಲ್ಲಿ ಮದುವೆಯಾಗಿದ್ದರು. ತಮ್ಮ ಎಲ್ಲಾ ಖುಷಿಯ ಕ್ಷಣಗಳ ನೆನಪುಗಳನ್ನು ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ಅವು ವೈರಲ್ ಆಗುತ್ತಲೆ ಇರುತ್ತವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net