ಅಂದಹಾಗೆ, ಬಹುಭಾಷಾ ನಟಿ ಸಮಂತಾ ವಿಚ್ಛೇದನ ಪಡೆದರೂ, ಈ ಬಾರಿ ಕೂಡಾ ಪ್ರೇಮಿಗಳ ದಿನವನ್ನು ವಿಭಿನ್ನವಾಗಿಯೇ ಆಚರಿಸಿದ್ದಾರೆ. ಹೌದು, ವೈವಾಹಿಕ ಜೀವನದಿಂದ ಹೊರನಡೆದ ಸಮಂತಾಗೆ, ಇದು ಮೊದಲ ಪ್ರೇಮಿಗಳ ದಿನವಾಗಿತ್ತು. ಹೀಗಿದ್ದರೂ, ಈ ದಿನವನ್ನು ನಟಿ ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದು, ಅಭಿಮಾನಿಗಳಿಂದ ಬೇಷ್ ಎನಿಸಿಕೊಂಡಿದ್ದಾರೆ. ತಮಗೆ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ಹೇಗಿತ್ತು ಎಂದು ಅಭಿಮಾನಿಗಳಿಗೆ ತಿಳಿಸಲು ಸೋಶಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.