ಮಾನುಷಿಗೆ ಹೆಚ್ಚಾಯ್ತು ಬೇಡಿಕೆ ... 'ಪೃಥ್ವಿರಾಜ್​' ಸೋತರೂ ಕಡಿಮೆಯಾಗಲಿಲ್ಲ ಅವಕಾಶ

Manushi Chillar New
Published on

ಮುಂಬೈ: "ಸಾಮ್ರಾಟ್​ ಪೃಥ್ವಿರಾಜ್​' ಬಾಕ್ಸ್​ ಆಫೀಸ್​ನಲ್ಲಿ ನೆಲ ಕಚ್ಚುತ್ತಿದ್ದಂತೆ ಆ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾನುಷಿ ಚಿಲ್ಲರ್​ ಕಥೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಏಕೆಂದರೆ, ಮೊದಲ ಚಿತ್ರದಲ್ಲೇ ಮಾನುಷಿಗೆ ಎಲ್ಲವೂ ಸಿಕ್ಕಿತ್ತು. ದೊಡ್ಡ ನಿರ್ಮಾಣ ಸಂಸ್ಥೆ, ದೊಡ್ಡ ಹೀರೋ, ದೊಡ್ಡ ಚಿತ್ರ ... ಆದರೆ, ಮಿಸ್​ ಆಗಿದ್ದು ಅದೃಷ್ಟ ಮಾತ್ರ. ಮೊದಲ ಚಿತ್ರವೇ ಸೋತಿದ್ದರಿಂದ ಅವರಿಗೆ ಮುಂದೆ ಅವಕಾಶಗಳು ಸಿಗುತ್ತವಾ? ಅಥವಾ ಮೊದಲ ಚಿತ್ರವೇ ಕೊನೆಯ ಚಿತ್ರವಾಗುತ್ತದಾ? ಎಂಬ ಮಾತುಗಳು ಕೇಳಿಬಂದವು. ಆದರೆ, ಮಾನುಷಿ ಬ್ಯಾಕ್​ ಟು ಬ್ಯಾಕ್​ ಎರಡು ಚಿತ್ರಗಳನ್ನು ಒಪ್ಪುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಮಾನುಷಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಈಗಾಗಲೇ ಸದ್ದಿಲ್ಲದೆ ಪ್ರಾರಂಭವಾಗಿದೆ. ಅದೇ "ಟೆಹ್ರಾನ್​'. ನೈಜ ಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಅರುಣ್​ ಗೋಪಾಲನ್​ ನಿರ್ದೇಶನ ಮಾಡುತ್ತಿದ್ದು, ಜಾನ್​ ಅಬ್ರಹಾಂ ನಾಯಕನಾಗಿ ನಟಿಸುತ್ತಿದಾರೆ. ಇದೊಂದು ಪಕ್ಕಾ ಥ್ರಿಲ್ಲರ್​ ಚಿತ್ರವಾಗಿದ್ದು, ಮ್ಯಾಡಕ್​ ಸಂಸ್ಥೆ ನಿರ್ಮಿಸುತ್ತಿದೆ. ಭಾರತವಲ್ಲದೆ, ಯೂರೋಪ್​ನಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

ಇದಲ್ಲದೆ, ಮಾನುಷಿ ಇನ್ನೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. "ದಿ ಗ್ರೇಟ್​ ಇಂಡಿಯನ್​ ಫ್ಯಾಮಿಲಿ' ಹೆಸರಿನ ಈ ಚಿತ್ರದಲ್ಲಿ ಅವರಿಗೆ ನಾಯಕನಾಗಿ ನಟಿಸುತ್ತಿರುವುದು ವಿಕ್ಕಿ ಕೌಶಲ್​. ಸದ್ಯ ಈ ಚಿತ್ರದ ಪ್ರೀ&ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ವರ್ಷದ ಕೊನೆಗೆ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net