68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಜಯ್​ ದೇವಗನ್​​,ಸೂರ್ಯ ಅತ್ಯುತ್ತಮ ನಟ, ಸಂಚಾರಿ ವಿಜಯ್​ ಅಭಿನಯದ ಚಿತ್ರಕ್ಕೂ ಪ್ರಶಸ್ತಿ

Surya-Devgan
Published on

ನವದೆಹಲಿ: ಪ್ರಸಕ್ತ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ನಟ ಸೂರ್ಯ ಮತ್ತು ಅಜಯ್​ ದೇವಗನ್​ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ಎರಡು ಸಿನಿಮಾಗಳು ಕೂಡ ಪ್ರಶ್ತಿಯನ್ನು ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಪರಿಸರ ಸಂರಕ್ಷಣೆ ಸಿನಿಮಾ ವಿಭಾಗದಲ್ಲಿ ಸಂಚಾರಿ ವಿಜಯ್​ ಅಭಿನಯದ ತಲೆದಂಡ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಹಾಗೆ ಬೆಸ್ಟ್​ ಕನ್ನಡ ಸಿನಿಮಾ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಸಸ್ತಿಯನ್ನು ಗೆದ್ದುಕೊಂಡಿದೆ.

ಈ ಕುರಿತು ಶುಕ್ರವಾರ ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್​​ ಮಾಹಿತಿ ಹಂಚಿಕೊಂಡಿದ್ದರು. ಕರೋನಾ ಕಾರಣದಿಂದ ಎರಡು ವರ್ಷ ಈ ಪ್ರಶಸ್ತಿಯನ್ನು ಘೋಷಿಸಿರಲಿಲ್ಲ. ಇದೀಗ 68ನೇ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಸಚ್ಚಿದಾನಂದನ್​ ಕೆಆರ್​​ ಮಲಯಾಳಂ ಅತ್ಯುತ್ತಮ ನಿರ್ದೇಶಕ, ಅಪರ್ಣಾ ಬಾಲಮುರಿ ಉತ್ತಮ ನಟನೆಗಾಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ವಿವರ ಇಲ್ಲಿದೆ:

ಅತ್ಯುತ್ತಮ ನಟ: ಅಜಯ್​ ದೇವಗನ್​ ಮತ್ತು ಸೂರ್ಯ

ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ (ಸೂರರೈಪೋಟ್ರು)

ಅತ್ಯುತ್ತಮ ಕನ್ನಡ ಸಿನಿಮಾ: ಡೊಳ್ಳು

ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ

ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ

ಅತ್ಯುತ್ತಮ ಕಥಾಚಿತ್ರ: ಸೂರರೈ ಪೋಟ್ರು

ಅತ್ಯುತ್ತಮ ಮಲಯಾಳಂ ಚಿತ್ರ: ತುಮ್ಕಲಾಶ್ಚ ನಿಶ್ಚಯಮ್

ಅತ್ಯುತ್ತಮ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್

ಅತ್ಯುತ್ತಮ ತಮಿಳು ಚಿತ್ರ: ಶಿವರಂಜಿನಿಯುಂ ಇನ್ನುಂ ಸಿಲ ಪೆಂಗಲುಂ

ಅತ್ಯುತ್ತಮ ತುಳು ಚಿತ್ರ: ಜೀತಿಗೆ

ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)

ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಮಧ್ಯ ಪ್ರದೇಶ

ಅತ್ಯುತ್ತಮ ಮಕ್ಕಳ ಸಿನಿಮಾ: ಸುಮಿ (ಮರಾಠಿ)

ಅತ್ಯುತ್ತಮ ನಿರ್ದೇಶಕ: ಸಚ್ಚಿದಾನಂದನ್​ ಕೆ.ಆರ್​

ಅತ್ಯುತ್ತಮ ಅಸ್ಸಾಮೀಸ್ ಸಿನಿಮಾ: ಬ್ರಿಡ್ಜ್

ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)

ಅತ್ಯುತ್ತಮ ಚಿತ್ರಕಥೆ: ಸುಧಾ ಕೊಂಗರು, ಶಾಲಿನಿ ಉಷಾ ನಾಯರ್​ (ಸೂರರೈ ಪೋಟ್ರು)

ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್​ ದೇಶಪಾಂಡೆ (ಮಿ ವಸಂತ್​ ರಾವ್​)

ಅತ್ಯುತ್ತಮ ಸಂಗೀತ ನಿರ್ದೇಶನ: ಥಮನ್ (ಸಿನಿಮಾ - ಅಲಾ ವೈಕುಂಠಪುರಮುಲೋ: ತೆಲುಗು)

ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ನಚಿಕೇತ್ ಬಾರ್ವೆ, ಮಹೇಶ್ ಶೆರ್ಲಾ - ಚಿತ್ರ: ತಾನ್ಹಾಜಿ (ಹಿಂದಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net