ಇಲ್ಲಿಗೂ ಬಂದರು ಸುಮಲತಾ ಅಂಬರೀಷ್​...

sumalatha
Published on

ಸಿನಿಮಾ, ರಾಜಕಾರಣ ಹೀಗೆ ಎರಡೂ ಕಡೆಗಳಲ್ಲಿ ಸಕ್ರಿಯರಾಗಿರುವ ನಟಿ ಮತ್ತು ಸಂಸದೆ ಸುಮಲತಾ ಅಂಬರೀಷ್​, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೂ ಸಕ್ರಿಯರು. ಇದೀಗ ಇನ್ನೊಂದು ವೇದಿಕೆಗೆ ಅವರ ಆಗಮನವಾಗಿದೆ. ಮಂಡ್ಯ ಕ್ಷೇತ್ರದ ಕಾರ್ಯವೈಖರಿಗಳ ಬಗ್ಗೆ ಚರ್ಚಿಸಲು ಸುಮಲತಾ ಅಂಬರೀಷ್​ ಹೆಸರಿನ ಯೂಟ್ಯೂಬ್​ ಚಾನೆಲ್​ ತೆರೆದಿದ್ದಾರೆ.

ಈಗಾಗಲೇ ಫೇಸ್​ಬುಕ್​, ಟ್ವಿಟರ್​ ಮತ್ತು ಇನ್ಸ್ಟಾಗ್ರಾಂಗಳನ್ನು ಸುಮಲತಾ ಬಳಕೆ ಮಾಡುತ್ತಿದ್ದಾರೆ. ಜನರ ತಲುಪುವಿಕೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು, ಯೂಟ್ಯೂಬ್​ ಮೊರೆ ಹೋಗಿದ್ದು, ಕ್ಷೇತ್ರದಲ್ಲಾದ ಬೆಳವಣಿಗೆಗಳು, ಅಭಿವೃದ್ಧಿ ಕಾರ್ಯಗಳು, ಕರೊನಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕೆಲಸಗಳು ಸೇರಿ ಅನಿಸಿಕೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರಂತೆ.

’ಈಗಾಗಲೇ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮೂಲಕ ನಿಮ್ಮೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿರುವೆ. ಇದೀಗ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿರುವೆ. ಮಂಡ್ಯ ಕ್ಷೇತ್ರದ ಕಾರ್ಯವೈಖರಿಗಳ ಜತೆಗೆ, ನಿಮ್ಮೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ. ಯೂಟ್ಯೂಬ್ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿ’ ಎನ್ನುವ ಸುಮಲತಾ, ಯೂಟ್ಯೂಬ್​ ಕೊಂಡಿಯನ್ನೂ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net