‘ಡವ್ ಮಾಸ್ಟರ್’ ಮೂಲಕ ನಟಿ ಶಕೀಲಾ ಚಂದನವನಕ್ಕೆ ಪುನರಾಗಮನ

Shakila
Published on

ಬೆಂಗಳೂರು: 2015ರಲ್ಲಿ ತೆರೆಗೆ ಬಂದಿದ್ದ ‘ಲವ್ ಯೂ ಆಲಿಯಾ’ ಚಿತ್ರವೇ ಕೊನೇ ಅದಾದ ಬಳಿಕ ಮಲಯಾಳಿ ನಟಿ ಶಕೀಲಾ ಸ್ಯಾಂಡಲ್​ವುಡ್​ಗೆ ಆಗಮಿಸಿರಲಿಲ್ಲ. ಇದೀಗ ಸುದೀರ್ಘ 6 ವರ್ಷಗಳ ಬಳಿಕ ‘ಡವ್ ಮಾಸ್ಟರ್’ ಮೂಲಕ ಮತ್ತೆ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ ಆರ್ಯ, ‘ಡವ್ ಮಾಸ್ಟರ್’ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಇಳಿದಿದ್ದಾರೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧದ ಮೌಲ್ಯ ತಿಳಿಸುವ ಕಥೆ ಇದಾಗಿರಲಿದೆ. ಹೆಚ್ಚೇನು ಮಾತನಾಡದೆ, ಮತ್ತೆ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು ನಟಿ ಶಕೀಲಾ.

‘ತುಂಬ ವರ್ಷಗಳ ಬಳಿಕ ಚಂದನವನಕ್ಕೆ ಆಗಮಿಸುತ್ತಿದ್ದೇನೆ. ಹಿಂದೆ ನಟಿಸಿರುವ ಸಿನಿಮಾಗಳಿಗಿಂತ ವಿಶೇಷ ಪಾತ್ರ ಈ ಸಿನಿಮಾದಲ್ಲಿದೆ. ಈಗಾಗಲೇ ಶೂಟಿಂಗ್ ಸಹ ಶುರುವಾಗಿದೆ’ ಎಂದು ಪಾತ್ರವನ್ನು ಗೌಪ್ಯವಾಗಿಟ್ಟರು. ಚಿತ್ರದಲ್ಲಿ ತಬಲಾ ನಾಣಿ, ನವೀನ್ ಪಡೀಲ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ರೋಷನ್ ಪಾಷಾ ನಿರ್ವಣದ ಈ ಚಿತ್ರಕ್ಕೆ ಶಕೀಲ್ ಅಹ್ಮದ್ ಸಂಗೀತ, ಕಿರಣ್ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net