ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

Malavika Sreenath
ಮಲಯಾಳಂ ನಟಿ ಮಾಳವಿಕಾ ಶ್ರೀನಾಥ್​
Published on

ಕೊಚ್ಚಿ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮಲಯಾಳಂ ನಟಿ ಮಾಳವಿಕಾ ಶ್ರೀನಾಥ್​ ಸೇರಿಕೊಂಡಿದ್ದಾರೆ.

ಮಂಜು ವಾರಿಯರ್​ ಮಗಳ ಪಾತ್ರ ಮಾಳವಿಕಾ ಶ್ರೀನಾಥ್​ ಓರ್ವ ಯುವನಟಿ. ಮಧುರಂ ಮತ್ತು ಸಾಟರ್ಡೆ ನೈಟ್​ ಸಿನಿಮಾಗಳ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದಾರೆ. ಸಿನಿಮಾ ಆಡಿಷನ್​ಗೆ ಕರೆದ ವೇಳೆ ಅನುಭವಿಸಿದ ಕಾಸ್ಟಿಂಗ್​ ಕೌಚ್​ ಕಹಿ ಅನುಭವವನ್ನು ಮಾಳವಿಕಾ ಬಹಿರಂಗಪಡಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಳವಿಕಾ, ಮಂಜು ವಾರಿಯರ್​ ಮಗಳ ಪಾತ್ರದಲ್ಲಿ ನಟಿಸಲು ಬಯಸುವುದಾದರೆ ನಮ್ಮ ಜತೆ ಸ್ವಲ್ಪ ಸಹಕರಿಸು ಎಂದು ಅವರು ಆಫರ್​ ಮಾಡಿದರು ಎಂದು ಮಾಳವಿಕಾ ತಿಳಿಸಿದರು. ಇದನ್ನೂ ಓದಿ: ಭವಾನಿ ಹೆಸರು ಪದೇ ಪದೇ ಪ್ರಸ್ತಾಪ: ಎಚ್‌ಡಿಕೆ ಮೇಲೆ ರೇವಣ್ಣ ಪರೋಕ್ಷ ಅಸಮಾಧಾನ ಆಡಿಷನ್‌ಗೆ ಹೋಗಲು ಒಪ್ಪಿಕೊಂಡೆ ಇದು 3 ವರ್ಷಗಳ ಹಿಂದೆ ನಡೆದ ಘಟನೆ. ಮಂಜು ವಾರಿಯರ್​ ಮಗಳ ಪಾತ್ರಕ್ಕಾಗಿ ನನ್ನನ್ನು ಆಡಿಷನ್​ಗೆ ಕರೆದರು. ಆ ಸಮಯದಲ್ಲಿ ನನಗೆ ಸಿನಿಮಾ ಸಂಪರ್ಕ ಇರಲಿಲ್ಲ. ಆಡಿಷನ್​ ಕರೆ ನಿಜವೋ? ಅಥವಾ ಅಲ್ಲವೋ? ನನಗೆ ತಿಳಿದಿರಲಿಲ್ಲ. ಆದರೆ, ನಾನು ಆಡಿಷನ್‌ಗೆ ಹೋಗಲು ಒಪ್ಪಿಕೊಂಡೆ. ಅವರು ಮನೆಗೆ ಇನ್ನೋವಾ ಕಾರನ್ನು ಕಳುಹಿಸಿದರು. ನಾನು ನನ್ನ ತಾಯಿ ಮತ್ತು ಸಹೋದರಿ ಜತೆ ಹೊರಟೆ. ಆಡಿಷನ್ ಎಲ್ಲೋ ತ್ರಿಶೂರಿನಲ್ಲಿತ್ತು.

ಇದನ್ನೂ ಓದಿ: ಹೆತ್ತವರಿಂದ ಪ್ರತ್ಯೇಕಿಸಿದರೆ ಪತಿಗೆ ವಿಚ್ಛೇದನ ಅವಕಾಶ ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವಾಗ ಆಡಿಷನ್​ ಸ್ಥಳ ತಲುಪಿದ ಅರ್ಧ ಗಂಟೆಯ ನಂತರ, ಓರ್ವ ವ್ಯಕ್ತಿ ನನಗೆ ಡ್ರೆಸ್ಸಿಂಗ್ ರೂಮ್‌ಗೆ ಹೋಗಲು ಹೇಳಿದರು. ಪ್ರಯಾಣ ಮಾಡಿದ್ದರಿಂದ ನಿಮ್ಮ ಕೂದಲು ಅಸ್ತವ್ಯಸ್ತವಾಗಿದೆ, ಅದನ್ನು ಸರಿಮಾಡಿಕೊಂಡು ಬನ್ನಿ ಎಂದು ಹೇಳಿದರು. ನಾನು ಡ್ರೆಸ್ಸಿಂಗ್​ ರೂಮ್​ನಲ್ಲಿ ಇರುವಾಗ ಆತ ನನ್ನನ್ನು ತಬ್ಬಿಕೊಂಡು ಖಾಸಗಿ ಅಂಗಗಳನ್ನು ಮುಟ್ಟಿದ. ಅವಕಾಶ ಬೇಕಾದರೆ ನನ್ನ ಜತೆ ಸಹಕರಿಸು ಎಂದನು. ನನಗೆ 10 ನಿಮಿಷ ಸಾಕು ಎಂದನು. ಈ ವೇಳೆ ನನ್ನ ತಾಯಿ ಮತ್ತು ಸಹೋದರಿ ನನಗಾಗಿ ಹೊರಗೆ ಕಾಯುತ್ತಿದ್ದರು. ನಾನು ಅಳಲು ಪ್ರಾರಂಭಿಸಿದೆ ಮತ್ತು ಅವನ ಕ್ಯಾಮೆರಾವನ್ನು ಕೆಡವಲು ಪ್ರಯತ್ನಿಸಿದೆ. ಅವರ ಗಮನ ಕ್ಯಾಮರಾ ಕಡೆ ತಿರುಗುವಷ್ಟರಲ್ಲಿ ನಾನು ತಪ್ಪಿಸಿಕೊಂಡೆ ಎಂದು ಮಾಳವಿಕಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net