More

    ಭವಾನಿ ಹೆಸರು ಪದೇ ಪದೇ ಪ್ರಸ್ತಾಪ: ಎಚ್‌ಡಿಕೆ ಮೇಲೆ ರೇವಣ್ಣ ಪರೋಕ್ಷ ಅಸಮಾಧಾನ

    ಬೆಂಗಳೂರು: ಜೆಡಿಎಸ್‌ನಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಗೊಂದಲ ಇನ್ನೂ ಮುಗಿದಂತಿಲ್ಲ. ಇಂದು ಸಂಜೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಅವರ ಪುತ್ರ, ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದರು.

    ‘‘ದೇವೇಗೌಡರ ಆಶೀರ್ವಾದದಿಂದ 5 ಬಾರಿ ಶಾಸಕನಾಗಿದ್ದೀನಿ. ಈಗ ಹಾಸನ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ದೇವೇಗೌಡರು ಏನ್ ಹೇಳ್ತಾರೋ ಅದೇ ಫೈನಲ್. ನಮಗೆ ಮಾವನವರ ತೀರ್ಮಾನವೇ ಮುಖ್ಯ ಅಂತ ಸ್ವತಃ ಭವಾನಿ ಹೇಳಿದ ನಂತರವೂ ಆಕೆಯ ಹೆಸರನ್ನು ಯಾಕೆ ಪದೇ ಪದೇ ತೆಗೆಯಬೇಕು’’ ಎಂದು ರೇವಣ್ಣ ಅವರು ತಮ್ಮ ಸೋದರ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

    ನಮ್ಮ ಕುಟುಂಬ ಒಡೆಯೋಕಾಗಲ್ಲ!

    ‘‘ಹಾಸನ ರಾಜಕಾರಣ ದೇವೇಗೌಡ್ರಿಗೆ ಚೆನ್ನಾಗಿ ಗೊತ್ತು. ಇವತ್ತು ‘ನಾನ್ ಹೇಳ್ತಿನಿ ಹೋಗಯ್ಯ’ ಅಂದಿದ್ದಾರೆ. ಅವರು ಏನ್ ಹೇಳ್ತಾರೋ ಅದೇ ಫೈನಲ್. ಪಕ್ಷೇತರರಾಗಿ ಸ್ಪರ್ಧೆ ಮಾಡ್ತೀವಿ ಅಂತ ನಾನು ಎಲ್ಲೂ ಹೇಳಿಲ್ಲ. ಅದು ನೀವೇ (ಮಾಧ್ಯಮದವರು) ಅಂದ್ಕೊಂಡಿರೋದು. ಜೆಡಿಎಸ್‌ನಲ್ಲಿ ಯಾವ ಬಂಡಾಯನೂ ಇಲ್ಲ. ಏನೂ ಇಲ್ಲ. ಕುಮಾರಸ್ವಾಮಿ ಮತ್ತು ರೇವಣ್ಣನನ್ನು ಯಾರೂ ಏನೂ ಮಾಡೋಕಾಗೋಲ್ಲ. ನಾವಿಬ್ಬರೂ ಹೊಡೆದಾಡಿಕೊಳ್ತೀವಿ ಅಂತ ಅನ್ನೋದೆಲ್ಲ ಭ್ರಮೆ. ಎಲ್ಲಾ ದೇವೇಗೌಡರು ಹೇಳಿದಂತೆ ಫೈನಲ್ ಆಗುತ್ತೆ’’ ಎಂದು ಸ್ಪಷ್ಟಪಡಿಸಿದರು.

    ಶಿವಲಿಂಗೇಗೌಡ ರಾಗಿ ಕಳ್ಳ!

    ಅರಸೀಕೆರೆ ಶಾಸಕರಾಗಿದ್ದ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದನ್ನು ಪ್ರಸ್ತಾಪಿಸಿದಾಗ, ‘‘ಹದಿನೈದು ವರ್ಷ ಸಾಕಿದೆ, ಅವನು ರಾಗಿ ಕಳ್ಳ. ಹೋಗಿ ಆಣೆ ಪ್ರಮಾಣ ಮಾಡಿದ… ಈಗ ಬರಲಿ… ಅವನ ಬಂಡವಾಳ ಬಿಚ್ಚಿಡ್ತೀನಿ. ಶಿವಲಿಂಗೇಗೌಡ ನಾನು ಮಾತಾಡಿದ್ದನ್ನ ಟೇಪ್ ಮಾಡಿಕೊಂಡಿದ್ದ. ಇರಲಿ, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಕೊಡ್ತೀನಿ. ದೇವೇಗೌಡರನ್ನು ಬಿಟ್ಟು ಹೋದವರು ಯಾರೂ ಉದ್ಧಾರ ಆಗಿಲ್ಲ’’ ಎಂದು ರೇವಣ್ಣ ಹೇಳಿದರು.

    ರಾಮಸ್ವಾಮಿ ಬಿಟ್ಟೋಗಿದ್ದೇಕೆ?

    ‘‘ಎ.ಟಿ. ರಾಮಸ್ವಾಮಿ ಕೂಡ ಕಾಂಗ್ರೆಸ್ಗೆ ಹೋಗುವುದಾಗಿ ಎರಡು ವರ್ಷದಿಂದ ಹೇಳುತ್ತಿದ್ದರು. ಕೊನೆಗೆ ಕಾಂಗ್ರೆಸ್‌ನವರು ಪ್ರವೇಶ ಕೊಡಲಿಲ್ಲ, ಟಿಕೆಟ್ಟೂ ಕೊಡಲಿಲ್ಲ. ಅದಕ್ಕೆ ಬಿಜೆಪಿಗೆ ಹೋದರು’’ ಎಂದು ಹೇಳಿದರು. ‘ನಮ್ಮ ಕುಟುಂಬಕ್ಕೆ ಹಾಸನದಲ್ಲಿರುವ ಕೆಲವು ಶಕುನಿಗಳ ಕಾಟ ಇದೆ, ರೇವಣ್ಣನನ್ನು ಒಪ್ಪಿಸುವ ಶಕ್ತಿ ದೇವೇಗೌಡರಿಗೂ ಇಲ್ಲ’ ಎಂಬ ಎಚ್‌ಡಿಕೆ ಹೇಳಿಕೆ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts