More

    105 ವರ್ಷ ವಯಸ್ಸಿನ ಅಜ್ಜಿ ಬಾಯಲ್ಲಿ ಮೂಡಿತು ಹೊಸ ಹಲ್ಲು; ತೊಟ್ಟಿಲೋತ್ಸವ ಮಾಡಿದ ಸಂಬಂಧಿಕರು

    ಬೀದರ್: ಇತ್ತೀಚಿನ ವರ್ಷಗಳಲ್ಲಿ ನೂರು ವರ್ಷ ಪೂರೈಸುವುದೇ ಅಪರೂಪ. ಅಂಥದ್ದರಲ್ಲಿ, ಶತಾಯುಷಿಯಾದವರಿಗೆ ಹೊಸ ಹಲ್ಲು ಚಿಗುರೊಡೆದರೆ? ಇದೊಂಥರಾ ವಿಶೇಷ ಅಲ್ಲವೇ? ಬೀದರ್ ಜಿಲ್ಲೆಯಲ್ಲೂ ಇಂಥದ್ದೇ ಒಂದು ವಿಶೇಷ ಕಂಡುಬಂದಿದೆ.

    ಇದನ್ನೂ ಓದಿ: ಪ್ರಚಾರದಲ್ಲಿ ಸುಂಟರಗಾಳಿ ಎಬ್ಬಿಸಲು ಬಿಜೆಪಿ ಪ್ಲ್ಯಾನ್; ಆಂಧ್ರ, ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಗರ್ಜನೆ ನಿರೀಕ್ಷೆ | ಅಖಾಡದಲ್ಲಿ ತಾರೆಯರ ಮಿಂಚು

    ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶತಾಯುಷಿ ಗಂಗಮ್ಮ ಗುರಪ್ಪ ಕಣ್ಣೂರ್ ಜನವಾಡ್ ಎಂಬ ಅಜ್ಜಿಗೆ ಹೊಸ ಹಲ್ಲು ಮೂಡಿದೆ. ಇಷ್ಟು ಇಳಿ ವಯಸ್ಸಿನಲ್ಲಿ ಹೊಸದಾಗಿ ಹಲ್ಲು ಚಿಗುರೊಡೆದರೆ ಅಂಥವರಿಗೆ ಈ ಭಾಗದಲ್ಲಿ ತೊಟ್ಟಿಲೋತ್ಸವ ಮಾಡಲಾಗುತ್ತದೆ.

    105 ವರ್ಷ ವಯಸ್ಸು ತುಂಬಿರುವ ಗಂಗಮ್ಮ ಅವರಿಗೆ ತೊಟ್ಟಿಲೋತ್ಸವ ಮಾಡಿ ಗೌರವಿಸಲಾಯಿತು. ಸಂಬಂಧಿಕರು ಹಾಗೂ ಪರಿಚಿತರು ಅಜ್ಜಿಯನ್ನು ಚಿಕ್ಕಮಗುವಿನಂತೆ ತೊಟ್ಟಿಲಲ್ಲಿ ಕೂರಿಸಿ ತೊಟ್ಟಿಲು ತೂಗಿದರು. ಅಜ್ಜಿಯ ತಲೆ ಮೇಲೆ ಗುಲಾಬಿ ಹೂವಿನ ದಳಗಳ ಮಳೆ ಸುರಿಸಿದರು. ಈ ಸಂದರ್ಭದಲ್ಲಿ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಣ್ಣೂರ ಜನವಾಡ ಪರಿವಾರದವರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

    ಇದನ್ನೂ ಓದಿ: ಸೋಲಾರ್ ಚಾಲಿತ ಉಳುಮೆ ಯಂತ್ರ; ರೈತಸ್ನೇಹಿ ಯಂತ್ರ ಸಿದ್ಧಪಡಿಸಿದ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts