ನಟ ಪ್ರಭಾಸ್ ಅವರ ಮುಂದಿನ ಸಿನಿಮಾ ‘ರಾಧೆ ಶ್ಯಾಮ್’ನಲ್ಲಿ ಅವರ ಆ್ಯಕ್ಷನ್ ಇಮೇಜ್ ಬದಿಗಿಟ್ಟು, ಡಾರ್ಲಿಂಗ್ ತಮ್ಮ ಲವರ್ ಬಾಯ್ ಇಮೇಜ್ಗೆ ಮರಳಲಿದ್ದಾರೆ. ಹೌದು, ಈ ಸಿನಿಮಾ ಮಾರ್ಚ್ 11 ರಂದು ತೆರೆಗೆ ಬರುತ್ತಿದೆ. ಇನ್ನು, ಹಲವು ಸಿನಿಮಾಗಳ ಕೆಲಸದಲ್ಲಿ ಬ್ಯೂಸಿಯಿರುವ ನಟ ಪ್ರಭಾಸ್ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಸಲಾರ್’ ಸಿನಿಮಾದಲ್ಲಿ ಕೂಡಾ ನಾಯಕ ನಟನಾಗಿ ಮಿಂಚಲಿದ್ದಾರೆ. ಸದ್ಯ, ಈ ಚಿತ್ರದ ಒಂದು ಹೊಸ ಅಪ್ಡೇಟ್ ಸಿಕ್ಕಿದೆ. ಅಂದಹಾಗೆ, ‘ಸಲಾರ್’ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯಲಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.