ಅರ್ಜುನ್​ ಕಪೂರ್​ ಆಯ್ತು, ಈಗ ಅವರ ಗರ್ಲ್​ಫ್ರೆಂಡ್​ಗೂ ಕರೊನಾ ಪಾಸಿಟಿವ್​!

Arjun Kapoor - Malaika Arora - Final
Published on

ಮುಂಬೈ: ಇದುವರೆಗೂ ಅದೆಷ್ಟು ಬಾಲಿವುಡ್​ ಸೆಲೆಬ್ರಿಟಿಗಳು ಕರೊನಾ ಪಾಸಿಟಿವ್​ಗಾಗಿ ಚಿಕಿತ್ಸೆ ಪಡೆದಿದ್ದಾರೋ ಲೆಕ್ಕ ಇಡುವುದು ಕಷ್ಟ. ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್​, ಐಶ್ವರ್ಯ ರೈ ಸೇರಿದಂತೆ ಈಗಾಗಲೇ ಹಲವರು ಕೋವಿಡ್​ ಪಾಸಿಟಿವ್​ಗೆ ತುತ್ತಾಗಿ, ಹುಷಾರಾಗಿ ಮನೆಗೆ ವಾಪಸ್ಸಾಗಿದ್ದರು.

ಈ ಪಟ್ಟಿಗೆ, ಭಾನುವಾರವಷ್ಟೇ ನಟ ಅರ್ಜುನ್​ ಕಪೂರ್​ ಸೇರಿಕೊಂಡಿದ್ದರು. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದ ಅವರು, ತಮಗೆ ಕೋವಿಡ್​ 19 ಪಾಸಿಟಿವ್​ ಎಂದು ಹೇಳಿಕೊಂಡಿದ್ದರು. ಈಗ ಅವರ ಗರ್ಲ್​ಫ್ರೆಂಡ್​ ಮಲೈಕಾ ಅರೋರಾಗೂ ಪಾಸಿಟಿವ್​ ಬಂದಿದೆ.

ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಕಳೆದೊಂದು ವರ್ಷದಿಂದ ಡೇಟಿಂಗ್​ ಮಾಡುತ್ತಿದ್ದರೂ, ತಮ್ಮ ಸಂಬಂಧದ ಕುರಿತಾಗಿ ಅಷ್ಟಾಗಿ ಹೇಳಿಕೊಂಡಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ, ಇಬ್ಬರೂ ಡೇಟಿಂಗ್​ ಮಾಡುತ್ತಿರುವ ವಿಷಯ ಹೇಳಿಕೊಂಡಿದ್ದರು. ಈ ಜೋಡಿಯ ಮದುವೆ ಯಾವಾಗ ಎಂಬ ಪ್ರಶ್ನೆ, ಇಬ್ಬರೂ ಸೆಲೆಬ್ರಿಟಿಗಳ ಅಭಿಮಾನಿಗಳ ವಲಯದಲ್ಲಿತ್ತು.

ಹೀಗಿರುವಾಗಲೇ ಕೋವಿಡ್​ ಟೆಸ್ಟ್​ ಮಾಡಿಸಿದಾಗ, ಭಾನುವಾರ ಅರ್ಜುನ್​ ಕಪೂರ್​ಗೆ ಪಾಸಿಟಿವ್​ ಎಂಬ ವಿಷಯ ಬಹಿರಂಗವಾಗಿದೆ. ಅದಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಮಲೈಕಾ ಅರೋರಾ ಸಹ ತಮಗೆ ಪಾಸಿಟಿವ್​ ಆಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನನಗೆ ಯಾವುದೇ ಸಿಂಪ್ಟಮ್​ಗಳು ಇರಲಿಲ್ಲ. ಆದರೂ ಟೆಸ್ಟ್​ ಮಾಡಿಸೋಣ ಎಂದು ಟೆಸ್ಟ್​ ಮಾಡಿಸಿದರೆ ಪಾಸಿಟಿವ್​ ಬಂದಿದೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಮಾಡಿಕೊಳ್ಳಲಿದ್ದೇನೆ. ಕೆಲವೇ ದಿನಗಳ ಬಳಿಕೆ ಇನ್ನಷ್ಟು ಆರೋಗ್ಯಕರವಾಗಿ ಮತ್ತು ಇನ್ನಷ್ಟು ಗಟ್ಟಿಯಾಗಿ ವಾಪಸ್ಸು ಬರಲಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net