ನಟಿ ಕಂಗನಾಗೆ ಕೇಂದ್ರದಿಂದ 'ವೈ ಪ್ಲಸ್'​ ಭದ್ರತೆ: ಏನಿದರ ವಿಶೇಷತೆ?

kangana
Published on

ನವದೆಹಲಿ: ಕೆಲ ವಾರಗಳಿಂದ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಮುಖಂಡ ಸಂಜಯ್ ರೌತ್ ಅವರೊಂದಿಗೆ ನಡೆಯುತ್ತಿರುವ ಜಟಾಪಟಿ ಹಿನ್ನೆಲೆಯಲ್ಲಿ, ನಟಿ ಕಂಗನಾ ರಣಾವತ್​ ಅವರಿಗೆ ವೈ ಪ್ಲಸ್​ ಭದ್ರತೆಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಂಗನಾ ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹೋಲಿಸಿದ್ದರು, ಇದರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ಮುಖಂಡರು ಕಿಡಿ ಕಾರಿದ್ದರು. ಸಂಜಯ್ ರೌತ್ ತನ್ನ ಸ್ವಂತ ರಾಜ್ಯ ಹಿಮಾಚಲ ಪ್ರದೇಶದಿಂದ ಮುಂಬೈಗೆ ಮರಳದಂತೆ ಎಚ್ಚರಿಕೆ ನೀಡಿದ ನಂತರ ಆಕೆ ಮತ್ತು ಕುಟುಂಬ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು.

ಇದೇ 9ರಂದು ಅವರು ಮುಂಬೈಗೆ ತೆರಳಲಿರುವ ಹಿನ್ನೆಲೆಯಲ್ಲಿ ಕಂಗನಾ ಅವರು ಸುರಕ್ಷತೆಯ ದೃಷ್ಟಿಯಿಂದ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಭದ್ರತೆ ಅಡಿ ಕಂಗನಾ ಅವರಿಗೆ ಒಬ್ಬರು ಅಥವಾ ಇಬ್ಬರು 2 ಕಮಾಂಡೋಗಳು ಭದ್ರತೆ ವಹಿಸಲಿದ್ದಾರೆ, ಜತೆಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಗಳ ಭದ್ರತಾ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಕಂಗನಾ ಅವರಿಗೆ ಭದ್ರತೆ ಒದಗಿಸಲು ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net