ಮೊದಲ ಬಾರಿ ಈ ಕಾರ್ಯಕ್ಕೂ ಕೈ ಹಾಕಿದ ಮಾಧುರಿ ದೀಕ್ಷಿತ್!

MADHURIDIXIT
Published on

ದಶಕಗಳಿಂದ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​ ತೆರೆಮೇಲೆ ಕಾಣಿಸಿಕೊಂಡು, ಪ್ರೇಕ್ಷಕರಿಗೆ ಮೋಡಿ ಮಾಡಿ ಇದೀಗ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಶಾಶ್ವತವಾಗಿ ಸಿನಿಮಾ ಕೈಬಿಟ್ಟಿಲ್ಲ. ಆಗೊಂದು ಈಗೊಂದು ಸಿನಿಮಾ ಮಾಡುತ್ತ ಪ್ರೇಕ್ಷಕರ ಟಚ್​ನಲ್ಲಿದ್ದಾರೆ. ಹೀಗಿರುವಾಗ ಬಹುದಿನಗಳಿಂದ ಗಾಯನದಲ್ಲೂ ಏನಾದರೂ ಮಾಡಬೇಕೆಂಬ ಆಸೆಯನ್ನು ಕರೊನಾ ಹೊತ್ತಲ್ಲಿ ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ ಮಾಧುರಿ. ಮೊದಲ ಬಾರಿ ಸಿಂಗಲ್​ ಹಾಡಿಗೆ ಧ್ವನಿಯಾಗಿ, ಒಂದಷ್ಟು ಜಾಗೃತಿಯನ್ನೂ ಮೂಡಿಸಿದ್ದಾರೆ.

ಹೌದು, ಮಾಧುರಿ ದೀಕ್ಷಿತ್​ ಕಂಠದಲ್ಲಿ ಮೂಡಿಬಂದ ‘ಕ್ಯಾಂಡಲ್​’ ಹೆಸರಿನ ಸಿಂಗಲ್​ ವಿಡಿಯೋ ಸಾಂಗ್​ ಶನಿವಾರ ಬಿಡುಗಡೆಯಾಗಿದೆ. ಕರೊನಾ ಹಿನ್ನೆಲೆಯಲ್ಲಿ ಸಿದ್ಧವಾದ ಈ ಹಾಡಿನಲ್ಲಿ ವಾರಿಯರ್ಸ್​ಗಳನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ಬರೆಯಲಾಗಿದೆ. ಭರವಸೆ ಕಳೆದುಕೊಳ್ಳಬೇಡಿ ಎಂಬ ಸಾಲು ಹಾಡಿನಲ್ಲಿದ್ದು, ಮಾಧುರಿ ಜತೆಗೆ ವಾರಿಯರ್ಸ್​ಗಳ ಸೇವೆ ಹೇಗಿದೆ ಎಂಬುದನ್ನು ಹಾಡಿನಲ್ಲಿ ವಿಡಿಯೋ ಮೂಲಕ ತೋರಿಸಲಾಗಿದೆ.

ಕಳೆದ ವಾರ ತಮ್ಮ ಜನ್ಮದಿನದಂದೇ ಸಿಂಗಲ್​ ಹಾಡಿನ ಬಿಡುಗಡೆ ಮಾಡುವ ಬಗ್ಗೆ ದಿನಾಂಕ ಘೋಷಿಸಿಕೊಂಡಿದ್ದ ಮಾಧುರಿ, ಹಾಡಿನ ಸಣ್ಣ ತುಣುಕೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಹಾಡಿನ ಪೂರ್ತಿ ವರ್ಷನ್​ ಹೊರಬಂದಿದ್ದು, ‘ಸಂತಸ, ಅಚ್ಚರಿ ಮತ್ತು ಅಷ್ಟೇ ಭಯವೂ ಆಗುತ್ತಿದೆ. ‘ಕ್ಯಾಂಡಲ್​’ ಇದು ನನ್ನ ಮೊಟ್ಟ ಮೊದಲ ಸಿಂಗಲ್​’ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net