‘ಸಯ್ಯಾ ... ಸಯ್ಯಾ ...’ ಅಂತಿದ್ದಾರೆ ಮನು

Prarambha Final
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮನುರಂಜನ್ ರವಿಚಂದ್ರನ್ ಅಭಿನಯದ ‘ಪ್ರಾರಂಭ’ ಇಷ್ಟರಲ್ಲಾಗಲೇ ಬಿಡುಗಡೆಯಾಗಿ ಹಳತಾಗಿರಬೇಕಿತ್ತು. ಮಾರ್ಚ್ ಕೊನೆಯ ವಾರದಲ್ಲೇ ಚಿತ್ರ ಬಿಡುಗಡೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಲಾಕ್‌ಡೌನ್ ಆಗಿ ಚಿತ್ರತಂಡದ ಯೋಚನೆಗಳೆಲ್ಲಾ ಬುಡಮೇಲಾಗಿದೆ.

ಹೀಗಿರುವಾಗಲೇ ಚಿತ್ರತಂಡದವರು ಬುಧವಾರ ‘ಸಯ್ಯಾ ಸಯ್ಯಾ ...’ ಎಂಬ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಲಿರಿಕಲ್ ವಿಡಿಯೋ, ಯೂಟ್ಯೂಬ್‌ನ ಆನಂದ್ ಆಡಿಯೋ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.ಚಂದನವನದ ಸದ್ಯದ ಸೆನ್ಸೇಶನ್ ಆಗಿರುವ ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದು, ಅವರ ಜತೆಗೆ ಅಶ್ವಿನಿ ಜೋಷಿ ಧ್ವನಿಗೂಡಿಸಿದ್ದಾರೆ.

‘ಪ್ರಾರಂಭ’, ಮನುರಂಜನ್ ಅಭಿನಯದ ಮೂರನೆಯ ಚಿತ್ರ. ‘ಸಾಹೇಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮನು, ಆ ನಂತರ ‘ಬೃಹಸ್ಪತಿ’ ಚಿತ್ರದಲ್ಲಿ ನಟಿಸಿದ್ದರು. ಈ ಮಧ್ಯೆ, ಇನ್ನೊಂದಿಷ್ಟು ಚಿತ್ರಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ, ಅವರು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದು ‘ಪ್ರಾರಂಭ’ ಚಿತ್ರವನ್ನು.

ಈ ಚಿತ್ರವನ್ನು ಮನು ಕಲ್ಯಾಡಿ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಅವರ ಸಹೋದರ ಜಗದೀಶ್ ಕಲ್ಯಾಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net