‘ಅರ್ಜುನ್​ ರೆಡ್ಡಿ’ ಚಿತ್ರಕ್ಕೆ ಮೊದಲು ಈ ಹೀರೋನನ್ನು ಅಪ್ರೋಚ್​ ಮಾಡಿದ್ರು ನಿರ್ದೇಶಕ ಸಂದೀಪ್​!?

Arjun
Published on

2017ರಲ್ಲಿ ಟಾಲಿವುಡ್​ನಲ್ಲಿ ಬಿಡುಗಡೆ ಆಗಿದ್ದ ಅರ್ಜುನ್​ ರೆಡ್ಡಿ ಸೂಪರ್​ ಹಿಟ್​ ಸಿನಿಮಾ. ನಟ ವಿಜಯ್​ ದೇವರಕೊಂಡ ಕರಿಯರ್​ಗೆ ದೊಡ್ಡ ಸಕ್ಸಸ್​ ಕೊಟ್ಟ ಚಿತ್ರ. ಇದೀಗ ಈ ಚಿತ್ರದ ಒಂದು ಇಂಟ್ರೆಸ್ಟಿಂಗ್​ ಮಾಹಿತಿಯನ್ನು ಹೊರಹಾಕಿದ್ದಾರೆ ನಿರ್ದೇಶಕ ಸಂದೀಪ್​ ವಂಗ.

ಹೌದು, ನಿರ್ದೇಶಕ ಸಂದೀಪ್​ ಅಂದುಕೊಂಡಂತೆ ಆಗಿದ್ದರೆ, ಟಾಲಿವುಡ್​ನ ಮತ್ತೋರ್ವ ನಟ ಶರ್ವಾನಂದ್​ ‘ಅರ್ಜುನ್​ ರೆಡ್ಡಿ’ ಚಿತ್ರದಲ್ಲಿ ನಾಯಕನಾಗಿ ನಟಿಸಬೇಕಿತ್ತು. ಕಥೆ ಕೇಳಿ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದ ಶರ್ವಾನಂದ್​, ಕೊನೇ ಕ್ಷಣದಲ್ಲಿ ಸಿನಿಮಾದಲ್ಲಿ ನಟಿಸಲಿಲ್ಲ. ಕೊನೆಗೆ ಅದು ವಿಜಯ್​ ದೇವರಕೊಂಡ ಪಾಲಿಗೆ ಒಲಿಯಿತು. ಕಥೆ ಕೇಳುತ್ತಿದ್ದಂತೆಯೇ ನಟಿಸಲು ಒಪ್ಪಿಕೊಂಡರು ವಿಜಯ್. ನಿರೀಕ್ಷೆಗೂ ಮೀರಿ ಸಿನಿಮಾ ಹಿಟ್​ ಆಯಿತು. ಟಾಲಿವುಡ್​ನಲ್ಲಿ ದೊಡ್ಡ ಕ್ರೇಜ್​ಗೆ ಕಾರಣವಾಯಿತು.

ಹಾಗಾದರೆ, ಶರ್ವಾನಂದ್​ ಹಿಂದೆ ಸರಿದಿದ್ದಕ್ಕೆ ಕಾರಣವೇನು? ನಿರ್ದೇಶಕರ ಪ್ರಕಾರ ಚಿತ್ರದ ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವಂತೆ ಶರ್ವಾನಂದ್​ ಸಲಹೆ ನೀಡಿದ್ದರು. ಜತೆಗೆ ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿಯೂ ಅವರು ಬಿಜಿಯಾಗಿದ್ದರು. ನಿರ್ದೇಶಕರು ಒಂದಷ್ಟು ಬದಲಾವಣೆಗೆ ಒಪ್ಪಿಕೊಂಡರಾದರೂ, ಕಾಲ್​ಶೀಟ್ ಸಮಸ್ಯೆಯಿಂದ ಸಿನಿಮಾದಿಂದ ಶರ್ವಾನಂದ್​ ಹಿಂದೆ ಸರಿಯಬೇಕಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net