More

    ಪೆನ್​ಡ್ರೈವ್ ಕೇಸ್​: ವಕೀಲ ದೇವರಾಜೇಗೌಡ ಆರೋಪ ಅಲ್ಲಗೆಳೆದ ಸಚಿವ ಪ್ರಿಯಾಂಕಾ ಖರ್ಗೆ

    ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ವಕೀಲ ದೇವರಾಜೇಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.

    ಇದನ್ನೂ ಓದಿ: ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

    ಪೆನ್‌ಡ್ರೈವ್‌ ಪ್ರಕರಣವನ್ನು ಹ್ಯಾಂಡಲ್​ ನಾಲ್ವರು ಸಚಿವರು ಒಳಗೊಂಡ ಸಮಿತಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ರಚಿಸಿದ್ದಾರೆ ಎಂಬ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಖಂಡಿಸಿದ್ದಾರೆ.

    ಪೆನ್​​ಡ್ರೈವ್​ ಪ್ರಕರಣದ ಬಗ್ಗೆ ದೇವರಾಜೇಗೌಡ ಅವರ ಆರೋಪಗಳೆಲ್ಲ ಸುಳ್ಳು. ದೇವರಾಜೇಗೌಡ ಅವರೇ ಅಮಿತ್‌ ಷಾ ಅವರ ನಿರ್ದೇಶನದ ಮೇರೆಗೆ ನಾನು ಇದನ್ನೆಲ್ಲಾ ಮಾಡಿರುವುದು ಅಂತಾ ಈಗಾಗಲೇ ಹೇಳಿದ್ದಾರೆ. ಇದನ್ನೂ ಅವರೇ ಹೇಳಿಸಿರಬಹುದು. ಆದರೆ ಇದನ್ನು ಕೋರ್ಟ್‌ ಆವರಣದಲ್ಲಿ ಹೇಳುವ ಅವಶ್ಯಕತೆ ಏನಿದೆ?. ಲಾಯರ್ ಆಗಿರುವ ನೀವು ಬಂದು ಎಲ್ಲಾ ದಾಖಲೆಗಳನ್ನು ನೀಡಿ. ನಿಮಗೆ ಸಂಪೂರ್ಣವಾಗಿ ಕಾನೂನಿನ ಅರಿವಿದೆ ಎಂದರು.

    ಬಿಜೆಪಿ ಮುಖಂಡ ದೇವರಾಜೇಗೌಡ ಏನು ಹೇಳಿದ್ದರು ?

    ಇಂದು(ಶುಕ್ರವಾರ) ಹಾಸನ ಕೋರ್ಟ್​ ದೇವರಾಜೇಗೌಡ ಅವರನ್ನು ಎಸ್​ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದು, ಈ ವೇಳೆ ಎಸ್​​ಐಟಿ ಅಧಿಕಾರಿಗಳು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರಕ್ರಿಯಿಸಿದ ದೇವರಾಜೇಗೌಡ ಅವರು, ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಮಾತನಾಡಿದ್ದಲ್ಲ ಎಂದು ಹೇಳಿದರು.

    ಹಗರಣ ಸಂಬಂಧ ಸುಮಾರು 100 ಕೋಟಿ ರೂ. ಹಣದ ಆಫರ್ ನೀಡಿದರು. ಐದು ಕೋಟಿ ರೂಪಾಯಿ ಅಡ್ವಾನ್ಸ್ ಹಣವನ್ನು ಬೌರಿಂಗ್ ಕ್ಲಬ್‌ನ 110 ರೂಂಗೆ ಕಳುಹಿಸಿದ್ದರು. ಚನ್ನರಾಯಪಟ್ಟಣ ಮಾಜಿ ವಿದಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರನ್ನು ಐದು ಕೋಟಿ ಹಣ ಕೊಟ್ಟು ಸಂಧಾನಕ್ಕೆ ಕಳುಹಿಸಿದ್ದರು. ಆದರೆ, ಇದಕ್ಕೆ ನಾನು ಒಪ್ಪದೇ ಇದ್ದಾಗ ಈಗಾಗಲೇ ದೊಡ್ಡ ಹಗರಣ ಆಗಿರುವುದರಿಂದ ಪ್ರಧಾನಿ ಮೋದಿ, ಬಿಜೆಪಿಗೆ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಸಂಚು ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.

    ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದರು. ಇದರಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts