ಮೋದಿ ಸರ್ಕಾರ ಪತನವಾಗಲಿದೆ ಎಂದಿದ್ದೇಕೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Untitled-design-2024-06-15T142321.259
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ತಪ್ಪಾಗಿ ರಚನೆಯಾಗಿದ್ದು ಶೀಘ್ರದಲ್ಲೇ ಅದು ಪತನವಾಗಲಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.

ಮೋದಿ ಅವರಿಗೆ ಜನಾದೇಶವಿಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ. ಈ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಇದು ಮುಂದುವರಿಯಬೇಕೆಂದು ನಾವು ಬಯಸುತ್ತೇವೆ. ಇದರಿಂದ ದೇಶಕ್ಕೆ ಒಳ್ಳೆಯದಾಗಬೇಕು. ದೇಶವನ್ನು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ದೇಶವನ್ನು ಬಲಪಡಿಸಲು ನಾವು ಸಹಕರಿಸುತ್ತೇವೆ ಎಂದು ಖರ್ಗೆ ಹೇಳಿದರು. ಆದರೆ ನಮ್ಮ ಪ್ರಧಾನಿಯವರಿಗೆ ಯಾವುದು ಚೆನ್ನಾಗಿ ನಡೆಯುತ್ತಿದೆಯೋ ಅದನ್ನು ಮುಂದುವರಿಸಲು ಬಿಡದ ಅಭ್ಯಾಸವಿದೆ ಎಂದು ಅವರು ಟೀಕಿಸಿದರು.

ಖರ್ಗೆಯವರು ಹೇಳಿದ್ದು ಸರಿ! ಎಂದು ಹೇಳಿರುವ ಆರ್‌ಜೆಡಿ ವಕ್ತಾರ ಏಜಾಜ್ ಅಹ್ಮದ್ ಅವರು ಜನಾದೇಶ ಮೋದಿ ಸರ್ಕಾರದ ವಿರುದ್ಧವಾಗಿತ್ತು. ಮತದಾರರು ಅವರನ್ನು ಸ್ವೀಕರಿಸಲಿಲ್ಲ. ಆದರೂ ಅವರು ಸರ್ಕಾರ ರಚಿಸಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ಬಿಜೆಪಿ ಎನ್​​ಡಿಎ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. ಮಿತ್ರಪಕ್ಷಗಳಾದ ಎನ್​​.ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ಮತ್ತು ಏಕನಾಥ್ ಶಿಂಧೆ ಅವರನ್ನು ಅವಲಂಬಿಸಿದೆ. ಅಲ್ಲದೆ ನರೇಂದ್ರ ಮೋದಿಯವರ ರಾಜಕೀಯ ಜೀವನದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸುತ್ತಿರುವುದು ಇದೇ ಮೊದಲು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net