ಲವ್​ ಯೂ ರಚ್ಚು ಚಿತ್ರದ ಫಸ್ಟ್ ಲುಕ್ ಬಿಡುಗಡೆ; ಒಂದಾಯ್ತು ಅಜಯ್- ರಚಿತಾ ಕಾಂಬಿನೇಷನ್​

collage (4)
Published on

ಬೆಂಗಳೂರು: ರಚಿತಾ ರಾಮ್ ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಗಳ ಪಟ್ಟಿಗೆ ಇನ್ನೊಂದು ಹೊಸ ಲವ್​ ಯೂ ರಚ್ಚು ಚಿತ್ರ ಸೇರ್ಪಡೆಯಾಗಿದೆ. ಇದೇ ಮೊದಲ ಬಾರಿಗೆ ಅವರು ಅಜೇಯ್ ರಾವ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ವಿುಸುತ್ತಿದ್ದು, ಫಸ್ಟ್ ಲುಕ್ ಹೊರಬಿದ್ದಿದೆ.

ಅಜಯ್ ರಾವ್ ಸಿನಿಮಾಗಳೆಂದರೆ ಕೃಷ್ಣ ಎಂಬ ಹೆಸರಿನಿಂದ ಶುರುವಾಗುವುದು ವಾಡಿಕೆ. ಈ ಚಿತ್ರ ಸಹ ಕೃಷ್ಣ ಎಂಬ ಹೆಸರಿನಿಂದ ಪ್ರಾರಂಭವಾಗುತ್ತದಾ ಎಂಬ ಪ್ರಶ್ನೆ ಇತ್ತು. ಆದರೆ, ಚಿತ್ರಕ್ಕೆ ‘ರಚ್ಚು ಐ ಲವ್ ಯೂ’ ಎಂಬ ಹೆಸರನ್ನು ಇಡಲಾಗಿದೆ. ಇದೀಗ ಆ ಚಿತ್ರದ ಫಸ್ಟ್ ಲುಕ್​ ಚಿತ್ರದ ನಾಯಕ ಅಜಯ್ ರಾವ್ ಬರ್ತ್​ಡೇ ಪ್ರಯುಕ್ತ ಬಿಡುಗಡೆಯಾಗಿದೆ.

ವಿಶೇಷವೆಂದರೆ, ಈ ಚಿತ್ರಕ್ಕೆ ನಿರ್ದೇಶಕ ಶಶಾಂಕ್ ಅವರು ಕಥೆ ಬರೆದಿರುವುದು. ಅಜೇಯ್ ರಾವ್ ಅಭಿನಯದಲ್ಲಿ ಶಶಾಂಕ್ ಇದುವರೆಗೂ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಬಾರಿ ಅಜಯ್​ಗೆ ತಕ್ಕ ಒಂದು ಕಥೆಯನ್ನು ಮಾತ್ರ ನೀಡಿದ್ದಾರೆ. ಮಿಕ್ಕಂತೆ ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಶಂಕರ್ ರಾಜ್. ಶಂಕರ್ ಈ ಹಿಂದೆ ಗುರು ದೇಶಪಾಂಡೆ ನಿರ್ದೇಶನದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ‘ಐ ಲವ್ ರಚ್ಚು’ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net